ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಗ್ಗಾವಿ: ಆಲೇಕಲ್ಲು ಮಳೆ ಮತ್ತು ಗಾಳಿಗೆ ಹೀರೆಕಾಯಿ ತರಕಾರಿ ಬೆಳೆ ಹಾಳು

ಶಿಗ್ಗಾವಿ: ರಾತ್ರಿ ಸುರಿದ ಆಲೇಕಲ್ಲು ಮಳೆ ಮತ್ತು ಗಾಳಿಗೆ ಒಟ್ಟು ಎರಡು ಎಕರೆಯಲ್ಲಿ ಬೆಳೆದಿದ್ದ ಹೀರೆಕಾಯಿ ತರಕಾರಿ ಬೆಳೆಯು ಹಾಳಾದ ಘಟನೆ ತಾಲೂಕಿನ ಹಿರೇಮಣಕಟ್ಟಿ ಗ್ರಾಮದಲ್ಲಿ ಜರುಗಿದೆ.

ಹಿರೇಮಣಕಟ್ಟಿ ಗ್ರಾಮದ ರೈತ ಬಸವರಾಜ ಅರ್ಜಪ್ಪ ತಡಿ ಹಾಗೂ ಚಿಕ್ಕಮಣಕಟ್ಟಿ ಗ್ರಾಮದ ರಾಮಪ್ಪ ಪರಪ್ಪ ಕರಡಿ ಎಂಬುವವರು ತಲಾ ಒಂದೊಂದು ಎಕರೆಯಲ್ಲಿ ಬೆಳೆದಿದ್ದ ಹೀರೆಕಾಯಿಯು ರಭಸದ ಗಾಳಿ ಮತ್ತು ಆಲೇಕಲ್ಲು ಮಳೆಗೆ ಸಂಪೂರ್ಣ ನೆಲಕಚ್ಚಿದ್ದು, ಹೂ ಬಿಡುವ ಹಂತದಲ್ಲಿದ್ದ ಬೆಳೆ ಸಂಪೂರ್ಣ ಹಾಳಾಗಿದೆ ಎಂದು ರೈತ ಬಸವರಾಜ ಕರಡಿ ತಿಳಿಸಿದ್ದಾರೆ.

ಸ್ಥಳಕ್ಕೆ ಸಂಬಂಧಿಸಿದ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಹಾಗೂ ಸಂಬಂಧಿಸಿದ ಪಿಡಿಓ ಹಾಗೂ ಗ್ರಾಮಲೆಕ್ಕಾಧಿಕಾರಿಗಳು ಬಂದು ಹಾನಿಯ ಪರಿಹಾರವನ್ನ ನೀಡಬೇಕು ಎಂದು ರೈತ ಮುಖಂಡ ಹಾಗೂ ಕನ್ನಡಪರ ಹೋರಾಟಗಾರ ರವಿ ಕಡಕೋಳ ಅಗ್ರಹಿಸಿದ್ದಾರೆ.

ವರದಿ. ಚನ್ನವೀರ ನೀರಲಗಿ, ಪಬ್ಲಿಕ್ ನೆಕ್ಸ್ಟ್ - ಶಿಗ್ಗಾವಿ

Edited By : Nagaraj Tulugeri
PublicNext

PublicNext

08/06/2026 05:42 pm

Cinque Terre

7.03 K

Cinque Terre

0

ಸಂಬಂಧಿತ ಸುದ್ದಿ