ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಧಾರಾಕಾರ ಮಳೆಗೆ ಜಲಾವೃತಗೊಂಡ ಜಮೀನು, ಮನೆಗಳಿಗೆ ನುಗ್ಗಿದ ನೀರು

​ಹಾವೇರಿ: ಹಾವೇರಿ ಜಿಲ್ಲೆಯಾದ್ಯಂತ ಶನಿವಾರ ಸಂಜೆ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಹಾವೇರಿ ನಗರ ಸೇರಿದಂತೆ ತಾಲೂಕಿನ ಅಗಡಿ, ಯತ್ನಿನಹಳ್ಳಿ, ಬಸವನಕಟ್ಟಿ, ಕನವಳ್ಳಿ ಮುಂತಾದ ಗ್ರಾಮಗಳಲ್ಲಿ ಭಾರಿ ಮಳೆ ಸುರಿದಿದೆ.

​ಮನೆಗಳಿಗೆ ನುಗ್ಗಿದ ನೀರು

ದಿಢೀರ್‌ ಸುರಿದ ಭರ್ಜರಿ ಮಳೆಗೆ ಅಗಡಿ ಗ್ರಾಮದ ಹಲವು ಮನೆಗಳ ಒಳಗೆ ನೀರು ನುಗ್ಗಿದ್ದು, ದಿನಸಿ ಹಾಗೂ ಗೃಹೋಪಯೋಗಿ ವಸ್ತುಗಳು ಜಲಾವೃತಗೊಂಡಿವೆ. ಮನೆಯೊಳಗೆ ನುಗ್ಗಿದ ನೀರನ್ನು ಹೊರಹಾಕಲು ಕುಟುಂಬಸ್ಥರು ತಡರಾತ್ರಿಯವರೆಗೆ ಹರಸಾಹಸ ಪಡಬೇಕಾಯಿತು.

​ನದಿಗಳಂತಾದ ರಸ್ತೆಗಳು

ಭಾರಿ ಮಳೆಯಿಂದಾಗಿ ಗ್ರಾಮದ ಪ್ರಮುಖ ರಸ್ತೆಗಳು ನದಿಗಳಂತಾಗಿದ್ದು, ಜಮೀನುಗಳು ಸಂಪೂರ್ಣವಾಗಿ ಜಲಮಯವಾಗಿವೆ. ಇದರಿಂದಾಗಿ ರೈತರು ಆತಂಕಕ್ಕೊಳಗಾಗಿದ್ದಾರೆ.

​ಗ್ರಾಮಸ್ಥರ ಆಕ್ರೋಶ

ಕನವಳ್ಳಿ ಗ್ರಾಮದಲ್ಲಿ ರಸ್ತೆಗಳು ಕೆರೆಯಂತಾಗಿದ್ದು, ಸುಮಾರು ಮೂರು ಅಡಿಯಷ್ಟು ಎತ್ತರಕ್ಕೆ ಮಳೆ ನೀರು ಹರಿದಿದೆ. "ಸಮರ್ಪಕವಾಗಿ ಚರಂಡಿ ಮತ್ತು ರಸ್ತೆ ನಿರ್ಮಾಣ ಮಾಡದ ಕಾರಣಕ್ಕೇ ಈ ಪರಿಸ್ಥಿತಿ ನಿರ್ಮಾಣವಾಗಿದೆ" ಎಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By :
PublicNext

PublicNext

06/06/2026 09:19 pm

Cinque Terre

13.5 K

Cinque Terre

0

ಸಂಬಂಧಿತ ಸುದ್ದಿ