ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಉಚಿತ ಬಿತ್ತನೆ‌ ಬೀಜಕ್ಕೆ ಮುಗಿಬಿದ್ದ ರೈತರು - ಜನಸಾಗರ ನಿಯಂತ್ರಿಸಲು ಪೊಲೀಸರ ಹರಸಾಹಸ!

ಹಾವೇರಿ: ನಗರದ ಜಾನುವಾರು ಮಾರುಕಟ್ಟೆಯ ಪ್ರಾಂಗಣದಲ್ಲಿರುವ ಪ್ರಾದೇಶಿಕ ಎಣ್ಣಿಬೀಜ ಬೆಳೆಗಾರರ ಸಹಕಾರಿ ಸಂಘದ ಒಕ್ಕೂಟದ ಗೋದಾಮಿನ ಮುಂದೆ ಮಂಗಳವಾರ ಎಲ್ಲಿ ನೋಡಿದಲ್ಲಿ ರೈತರೇ ರೈತರು. ರೈತರು ಈ ರೀತಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಲು ಕಾರಣವಾಗಿದ್ದು ಪ್ರಾದೇಶಿಕ ಎಣ್ಣಿಬೀಜ ಬೆಳೆಗಾರರ ಸಹಕಾರಿ ಸಂಘ ಉಚಿತ ಸೋಯಾಬಿನ್ ಬಿತ್ತನೆ ಬೀಜ ವಿತರಣೆಗೆ ಮುಂದಾಗಿದ್ದು.

ಪ್ರತಿವರ್ಷ ಈ ಒಕ್ಕೂಟ ನಿಗದಿಪಡಿಸಿದ ರೈತರಿಗೆ ಉಚಿತವಾಗಿ ಬಿತ್ತನೆ ಬೀಜ ವಿತರಣೆ ಮಾಡುತ್ತದೆ. ಅದರಂತೆ ಈ ವರ್ಷ ಸಹ ಸೋಯಾಬಿನ್ ಬಿತ್ತನೆ ಬೀಜ ವಿತರಣೆಗೆ ಮುಂದಾಗಿತ್ತು.

ಹಾವೇರಿ ತಾಲೂಕಿನ ಸುಮಾರು 1500 ರೈತರಿಗೆ 25 ಕೆಜಿ ಸೋಯಾಬಿನ್ ಬಿತ್ತನೆ ಬೀಜ ವಿತರಣೆಗೆ ಮುಂದಾಗಿತ್ತು. ಇದಕ್ಕಾಗಿ ರೈತರಿಂದ ಅರ್ಜಿ ಆಹ್ವಾನಿಸಿತ್ತು. ಆದರೆ ಉಚಿತವಾಗಿ ಬಿತ್ತನೆ ಬೀಜ ವಿತರಿಸುತ್ತಿದ್ದಾರೆ ಎನ್ನುತ್ತಿದ್ದಾರೆ ಹಾವೇರಿ ಜಿಲ್ಲೆಯ ಸಾವಿರಾರು ರೈತರು ಒಕ್ಕೂಟದ ಕಚೇರಿಗೆ ಆಗಮಿಸಿ ಬಿತ್ತನೆ ಬೀಜ ಪಡೆಯಲು ಮುಂದಾದರು.

Edited By : Shivu K
PublicNext

PublicNext

02/06/2026 09:01 pm

Cinque Terre

17.23 K

Cinque Terre

0

ಸಂಬಂಧಿತ ಸುದ್ದಿ