ಬೆಂಗಳೂರು: ಬಿಳಿ ಉಡುಪಿನ ಹಿಂದಿರುವ ಆ ಕರುಣಾಮಯಿ ಹೃದಯಗಳಿಗೆ ಇಂದು ಹೆಮ್ಮೆಯ ಗೌರವ. ರೋಗಿಗಳ ಪಾಲಿನ ಜೀವದಾತರಾಗಿ, ಹಗಲಿರುಳು ನಿಸ್ವಾರ್ಥ ಸೇವೆ ಸಲ್ಲಿಸುವ ನಮ್ಮ ಹೆಮ್ಮೆಯ ನರ್ಸಿಂಗ್ ವೃತ್ತಿಪರರಿಗಾಗಿ ಆಯೋಜಿಸಲಾಗಿದ್ದ ಅಪೂರ್ವ ಕ್ಷಣಕ್ಕೆ ಇಂದು ರಾಜಧಾನಿ ಬೆಂಗಳೂರು ಸಾಕ್ಷಿಯಾಯಿತು.
ಹೌದು, ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಇಂದು 25ನೇ ವರ್ಷದ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪ್ರದಾನ ಸಮಾರಂಭ 2026 ಜೊತೆಗೆ ಮಕ್ಕಳ ನೃತ್ಯ ಪ್ರದರ್ಶನ ಕೂಡ ನೆರವೇರಿತು.
ಕರ್ನಾಟಕ ಸರ್ಕಾರದ ಈ ಸಮಾರಂಭದಲ್ಲಿ, ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ. ಖಾದರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸಾಧಕ ನರ್ಸ್‌ಗಳನ್ನು ಆತ್ಮೀಯವಾಗಿ ಸನ್ಮಾನಿಸಿದರು. ಈ ವೇಳೆ ಮಾತನಾಡಿದ ಸಚಿವರು, ನರ್ಸಿಂಗ್ ವೃತ್ತಿಯ ಪಾವಿತ್ರ್ಯತೆಯನ್ನು ಕೊಂಡಾಡುತ್ತಾ ಭಾವುಕ ನುಡಿಗಳನ್ನಾಡಿದರು.
ಸಮಾರಂಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್, ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (RGUHS) ಕುಲಪತಿಗಳಾದ ಡಾ. ಭಗವಾನ್ ಬಿ. ಸಿ. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ನರ್ಸಿಂಗ್ ಕ್ಷೇತ್ರದ ಸಾಧಕರ ಸೇವೆಯನ್ನು ಶ್ಲಾಘಿಸಿದರು. ಇಜಿ ನರ್ಸ್' (Ezi Nurse) ಸಂಸ್ಥೆಯ ಸಹಯೋಗದಲ್ಲಿ ನಡೆದ ಈ ಬೆಳ್ಳಿ ಹಬ್ಬದ ಸಂಭ್ರಮ, ಆರೋಗ್ಯ ಕ್ಷೇತ್ರದ ನಿಜವಾದ ಹೀರೋಗಳಿಗೆ ಸಂದ ಅತಿ ದೊಡ್ಡ ಗೌರವ- ಗೌರವಾನ್ವಿತ ಕ್ಷಣವಾಗಿ ಇತಿಹಾಸದ ಪುಟ ಸೇರಿತು.
PublicNext
18/06/2026 01:29 pm