ಬ್ರಹ್ಮಾವರ: ಕೇಂದ್ರ ಸರಕಾರದ ನಶಾಮುಕ್ತ ಭಾರತ ಅಭಿಯಾನ ಅಂಗವಾಗಿ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಶಾ ಮುಕ್ತ ಸಪ್ತಾಹ ಕಾರ್ಯಕ್ರಮ ಸಾಯಿಬರಕಟ್ಟೆ, ಯಡ್ತಾಡಿ ಮಂದಾರ್ತಿ ಸೇರಿದಂತೆ ನಾನಾ ಭಾಗದ ಶಾಲೆಯಲ್ಲಿ ಮಂಗಳವಾರ ಜರುಗಿತು.
ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ಟೆಂಪಲ್ ಪದವಿ ಪೂರ್ವ ಕಾಲೇಜಿನಲ್ಲಿ ಬ್ರಹ್ಮಾವರ ಪಿಎಸ್ ಐ ಮುಕ್ತಾ ರವರು ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳಿಂದ ಆಗುವ ಸಾಮಾಜಿಕ ಸಮಸ್ಯೆ ಆರ್ಥಿಕ ಸಮಸ್ಯೆ ಆರೋಗ್ಯ ಮತ್ತು ಸಮಾಜದ ಕುಟುಂಬದ ಮೇಲೆ ಆಗುವ ದುಷ್ಪರಿಣಾಮದ ಕುರಿತು ವಿದ್ಯಾರ್ಥಿಗಳಲ್ಲಿ ಮಾಹಿತಿ ನೀಡಿ ಜಾಗೃತಿ ಮೂಡಿಸಿದರು.
ಬ್ರಹ್ಮಾವರ ಪೊಲೀಸ್ ಠಾಣೆಯ ಪ್ರೋಬೆಷನಲ್ ಪಿಎಸ್ ಐ ಪ್ರತಿಭಾ, ಆಶ್ರಿತಾ, ಪಿಎಸ್ ಐ ಜಯಕುಮಾರ್, ಸಿಬ್ಬಂದಿಗಳಾದ ಇಂಬ್ರಾನ್, ಮುರಳಿ, ವಿನೋದ್, ಸುಮಿತ್ರಾ ಮತ್ತು ಶಾಲಾ ಮುಖ್ಯೋಪಾಧ್ಯಾಯರು ಶಿಕ್ಷಕ ಶಿಕ್ಷಕಿಯರು ಹಾಜರಿದ್ದರು. ಶಾಲೆಯ ನೂರಾರು ವಿದ್ಯಾರ್ಥಿಗಳು ಅಭಿಯಾನದಲ್ಲಿ ಪಾಲ್ಗೊಂಡರು.
PublicNext
18/06/2026 03:19 pm
LOADING...