ಹುಬ್ಬಳ್ಳಿ: ಕಾನೂನು ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಪಡೆದು ಯಶಸ್ವಿ ವಕೀಲರು, ನ್ಯಾಯತಜ್ಞರು ಹಾಗೂ ಕಾರ್ಪೊರೇಟ್ ಲೀಗಲ್ ವೃತ್ತಿಪರರಾಗುವ ಕನಸು ಹೊಂದಿರುವ ವಿದ್ಯಾರ್ಥಿಗಳಿಗೆ, ಕೆಎಲ್‌ಇ ಟೆಕ್ನಾಲಜಿಕಲ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಲೀಗಲ್ ಸ್ಟಡೀಸ್ ಸುವರ್ಣಾವಕಾಶ ಕಲ್ಪಿಸಿದೆ. ಕಾನೂನು ಶಿಕ್ಷಣದ ಕುರಿತು ಸಂಪೂರ್ಣ ಮಾಹಿತಿ ನೀಡಲು 'ಓಪನ್ ಹೌಸ್–2026' ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಕೆಎಲ್‌ಇ ಟೆಕ್ನಾಲಜಿಕಲ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಲೀಗಲ್ ಸ್ಟಡೀಸ್ ವತಿಯಿಂದ, ಜೂನ್ 21, ಭಾನುವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯವರೆಗೆ 'ಓಪನ್ ಹೌಸ್–2026' ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಕಾನೂನು ಶಿಕ್ಷಣದ ಅವಕಾಶಗಳು, ಕೋರ್ಸ್‌ಗಳ ಮಾಹಿತಿ, ಪಠ್ಯಕ್ರಮ, ಮೂಟ್ ಕೋರ್ಟ್ ಅನುಭವ, ಕಾರ್ಪೊರೇಟ್ ಕ್ಷೇತ್ರದಲ್ಲಿನ ಉದ್ಯೋಗಾವಕಾಶಗಳು, ಅಧ್ಯಾಪಕರೊಂದಿಗೆ ಸಂವಾದ, ಕ್ಯಾಂಪಸ್ ಭೇಟಿ ಹಾಗೂ ಪ್ರವೇಶ ಮಾರ್ಗದರ್ಶನ ಸೇರಿದಂತೆ ಹಲವು ವಿಷಯಗಳ ಕುರಿತು ಮಾಹಿತಿ ನೀಡಲಾಗುತ್ತದೆ.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೆಎಲ್‌ಇ ಲಾ ಕಾಲೇಜು, ಬೆಂಗಳೂರಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಮನೋಜ್ ಕುಮಾರ್ ಹಿರೇಮಠ ಭಾಗವಹಿಸಲಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಾರ್ಗದರ್ಶನ ನೀಡಲಿದ್ದಾರೆ.
ಬಿಬಿಎ ಎಲ್‌ಎಲ್‌ಬಿ (ಆನರ್ಸ್), ಎಲ್‌ಎಲ್‌ಬಿ (ಆನರ್ಸ್) ಹಾಗೂ ಎಲ್‌ಎಲ್‌ಎಂ ಕೋರ್ಸ್‌ಗಳಿಗೆ 2026-27ನೇ ಸಾಲಿನ ಪ್ರವೇಶ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಕಾನೂನು ಶಿಕ್ಷಣದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಮತ್ತು ಪೋಷಕರು ಈ ಓಪನ್ ಹೌಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳುವಂತೆ ವಿಶ್ವವಿದ್ಯಾಲಯ ಮನವಿ ಮಾಡಿದೆ.
ಕಾನೂನು ಕ್ಷೇತ್ರದಲ್ಲಿ ಭವಿಷ್ಯ ಕಟ್ಟಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ಈ 'ಓಪನ್ ಹೌಸ್–2026' ಉತ್ತಮ ವೇದಿಕೆಯಾಗಿದ್ದು, ಆಸಕ್ತರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅಥವಾ ನೀಡಿರುವ ಸಂಪರ್ಕ ಸಂಖ್ಯೆಗಳ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ.
Kshetra Samachara
19/06/2026 03:16 pm