ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಳೆ, ಗಾಳಿ ಅಬ್ಬರಕ್ಕೆ ಕಿತ್ತು ಬಿದ್ದ ಕನ್ನಡ ಶಾಲೆ ಮೇಲ್ಛಾವಣಿ; ಕೂದಲೆಳೆ ಅಂತರದಲ್ಲಿ ಮಕ್ಕಳು ಪಾರು

ಹುಬ್ಬಳ್ಳಿ: ಇಂದು ಸುರಿದ ಮಳೆ- ಗಾಳಿಯ ಅಬ್ಬರಕ್ಕೆ ಕನ್ನಡ ಶಾಲೆಯ ಮೇಲ್ಛಾವಣಿಯ ತಗಡು ಕಿತ್ತು ಬಿದ್ದಿರುವ ಘಟನೆ ಹುಬ್ಬಳ್ಳಿ ತಾಲ್ಲೂಕಿನ ಭಂಡಿವಾಡ ಗ್ರಾಮದಲ್ಲಿ‌ ನಡೆದಿದ್ದು, ಅದೃಷ್ಟವಶಾತ್ ಮಕ್ಕಳಿಗೆ ಏನು ಆಗಿಲ್ಲಾ.

ಹೌದು,,, ಇಂದು ಏಕಾಏಕಿಯಾಗಿ ಸುರಿದ ಮಳೆ- ಗಾಳಿಯಿಂದ ಇಡೀ ಗ್ರಾಮದ ಜನರು ತತ್ತರಿಸಿ ಹೋಗಿದ್ದಾರೆ. ಮಳೆಗಿಂತ ಹೆಚ್ಚು ರಭಸದ ಗಾಳಿಯಿಂದ ಶಾಲೆ ಮೇಲೆ ಹಾಕಿದ ತಗಡಿನ ಶೀಟ್ ಹಾರಿ ಬಿದ್ದಿವೆ. ಅಷ್ಟೇ ಅಲ್ದೆ ಸಾಕಷ್ಟು ಮನೆಗಳಿಗೆ ಹಾನಿಯಾಗಿವೆ. ಇಡೀ ಗ್ರಾಮದ ಜನರು ಭಯಭೀತರಾಗಿದ್ದಾರೆ.

ಈ ಭಾಗದ ಶಾಸಕ ಎನ್‌.ಹೆಚ್. ಕೋನರೆಡ್ಡಿ ಅವರು ಕನ್ನಡ ಶಾಲೆಗೆ ಸೂಕ್ತವಾಗಿ ನಿರ್ವಹಣೆ ಮಾಡಬೇಕಿದೆ. ಅದೃಷ್ಟಕ್ಕೆ ಮಕ್ಕಳು ಮನೆಗೆ ಹೋದ ಮೇಲೆ ಮಳೆ- ಗಾಳಿ ಶಾಲೆಗೆ ಹಾಜರಾಗಿದೆ. ಅಕಸ್ಮಾತ್ ಶಾಲೆ ಒಳಗೆ ಮಕ್ಕಳು ಇದ್ದಾಗ ಈ ಘಟನೆ ನಡೆದಿದ್ದರೆ, ಶಾಲಾ ಮಕ್ಕಳ ಜೀವಕ್ಕೆ ಕುತ್ತಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು.

ಕೂಡಲೇ ಸಂಬಂಧಿಸಿದ ಅಧಿಕಾರಿಗಳು, ಶಾಸಕರು ಈ ಶಾಲೆಯನ್ನು ಗಟ್ಟಿಗೊಳಿಸಿ ಮಕ್ಕಳ ಜೀವ ಕಾಪಾಡಬೇಕಿದೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

16/06/2026 09:02 am

Cinque Terre

54.37 K

Cinque Terre

1

ಸಂಬಂಧಿತ ಸುದ್ದಿ