ಧಾರವಾಡ: ಧಾರವಾಡ ಜಿಲ್ಲಾ ನಿರ್ಮಿತ ಕೇಂದ್ರದ ಯೋಜನಾ ಅಭಿಯಂತರ ಸುರೇಂದ್ರಕುಮಾರ್ ಕಳಸ ಅವರ ನಿವಾಸ ಹಾಗೂ ಕಚೇರಿ ಮೇಲೆ ಶುಕ್ರವಾರ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು.
ಆದಾಯ ಮೀರಿ ಆಸ್ತಿ ಗಳಿಕೆ ಹಿನ್ನೆಲೆ ಲೋಕಾಯುಕ್ತ ಪೊಲೀಸರು ಧಾರವಾಡ ಕಲ್ಯಾಣನಗರದಲ್ಲಿರುವ ವಾಸದ ಮನೆ, ಬಾಡಿಗೆ ಕೊಟ್ಟಿರುವ ಮನೆ, ಪಿ.ಜಿ. ಹಾಗೂ ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದರು.
ಈ ವೇಳೆ ಸುರೇಂದ್ರಕುಮಾರ್ ಮಾಲೀಕತ್ವದ ಅಪಾರ್ಟ್ಮೆಂಟ್ನಲ್ಲಿ ಪ್ಲ್ಯಾಟ್, ಪೇಯಿಂಗ್ ಗೆಸ್ಟ್ ಕಟ್ಟಡ ಮತ್ತು 1 ಕಾರು ಪತ್ತೆಯಾಗಿದೆ. ಕೊಪ್ಪಳ ಮತ್ತು ರಾಯಚೂರಿನಲ್ಲಿ 8 ನಿವೇಶನಗಳು, ರಾಯಚೂರಿನಲ್ಲಿ 7 ಎಕರೆ ಜಮೀನಿನ ದಾಖಲೆಗಳು ಪತ್ತೆಯಾಗಿವೆ. ಸುರೇಂದ್ರಕುಮಾರ್ ನಗರದಲ್ಲಿ ಪ್ಲ್ಯಾಟ್ ಹೊಂದಿದ್ದು, ಅದರಲ್ಲಿ ವಾಸಿಸದೇ ಬಾಡಿಗೆ ಮನೆಯಲ್ಲಿದ್ದರು. ದಾಳಿಯಲ್ಲಿ ಪತ್ತೆಯಾದ ಸ್ಥಿರ ಮತ್ತು ಚರಾಸ್ತಿಗಳ ದಾಖಲಾತಿಗಳನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/06/2026 09:32 pm
LOADING...