ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕೈಕೊಟ್ಟ ಮಳೆ : 24 ತಾಸು ನಿರಂತರ ವಿದ್ಯುತ್ ಪೂರೈಕೆ ಮಾಡಲು ಅನ್ನದಾತನ ಆಗ್ರಹ

ಧಾರವಾಡ: ಸದ್ಯ ಎಲ್ಲೆಡೆ ಮುಂಗಾರು ಬಿತ್ತನೆ ಆಗಿದೆ. ಭೂಮಿಗೆ ಬಿತ್ತಿದ ಬೀಜ ಮೊಳಕೆಯೊಡೆಯುವಷ್ಟರಲ್ಲಿ ಮಳೆರಾಯ ಕೈಕೊಟ್ಟಿದ್ದಾನೆ. ಮಳೆಯ ಮುನ್ಸೂಚನೆ ಇಲ್ಲದೇ ಇರುವುದರಿಂದ ಕಂಗಾಲಾದ ಅನ್ನದಾತ ಸರ್ಕಾರ ರೈತರ ಪಂಪ್‌ಸೆಟ್‌ಗಳಿಗೆ 24 ತಾಸು ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾನೆ.

ಸದ್ಯ ಬಿತ್ತನೆ ಮಾಡಲಾಗಿದ್ದು, ಬಿತ್ತನೆ ಮಾಡಿದ ಬೆಳೆಗಳಿಗೆ ನೀರು ಹಾಯಿಸಲು ವಿದ್ಯುತ್ ಬೇಕು. ಸದ್ಯ ನೀಡಲಾಗುತ್ತಿರುವ 7 ತಾಸು ವಿದ್ಯುತ್ ಸಾಕಾಗುವುದಿಲ್ಲ. ನಿರಂತರ 24 ಗಂಟೆ ವಿದ್ಯುತ್ ಪೂರೈಕೆಯಾದರೆ ರೈತ ಬಿತ್ತಿದ ಬೆಳೆಗೆ ನೀರುಣಿಸಿ ದೇಶಕ್ಕೆ ಅನ್ನ ಹಾಕುತ್ತಾನೆ. ರಾಜ್ಯ ಸರ್ಕಾರ ಕೂಡಲೇ ರೈತರ ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಹುಬ್ಬಳ್ಳಿ ತಾಲೂಕಿನ ಛಬ್ಬಿ ಹೋಬಳಿ ರೈತರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಸರ್ಕಾರ ರೈತರ ಈ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಇಲ್ಲದೇ ಹೋದರೆ ದೇಶಕ್ಕೆ ಅನ್ನ ಹಾಕುವ ರೈತ ಸಿಡಿದೇಳಬೇಕಾದ ಪರಿಸ್ಥಿತಿ ಬರಬಹುದು ಎಂದು ರೈತರು ಇದೇ ವೇಳೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

19/06/2026 04:09 pm

Cinque Terre

22.13 K

Cinque Terre

1

ಸಂಬಂಧಿತ ಸುದ್ದಿ