ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಸಿ:ಡಿಗ್ರಿ ಕಾಲೇಜು ರಸ್ತೆಯಲ್ಲಿ ಕಸದ ರಾಶಿ : ದಿವ್ಯ ನಿರ್ಲಕ್ಷ ತೋರಿದ ಕುಳವೆ ಗ್ರಾ. ಪಂ. ಅಧಿಕಾರಿಗಳು

ಶಿರಸಿ:ಶಿರಸಿಯ ಬನವಾಸಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೋಗುವ ದಾರಿಯಲ್ಲಿ ಕೆಲವರು ಕಸ ಚೆಲ್ಲುತ್ತಿದ್ದು ಇದರಿಂದ ಸಾಂಕ್ರಾಮಿಕ ರೋಗಗಳು ಎದುರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇದೇ ರಸ್ತೆ ಮೂಲಕ ದಿನನಿತ್ಯ ವಿದ್ಯಾರ್ಥಿಗಳು ಸಾರ್ವಜನಿಕರು ಓಡಾಟ ನಡೆಸುವ ರಸ್ತೆ ಇದಾಗಿದ್ದು ಹಲವಾರು ಬಾರಿ ಸಂಬಂಧ ಪಟ್ಟವರಿಗೆ ತಿಳಿಸಿದರು ಇದರ ಕುರಿತು ತಲೆ ಕೆಡಿಸಿಕೊಳ್ಳುತ್ತಿಲ್ಲ ಆದುದರಿಂದ

ವಿದ್ಯಾರ್ಥಿಗಳು ಹಾಗೂ ಟಿಪ್ಪು ನಗರ ನಿವಾಸಿಗಳು, ಕ್ರಮ ಕೈಗೊಳ್ಳದ ಪಂಚಾಯಿತಿ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಹಾಗೂ ಈ ಕೂಡಲೇ ಸಂಬಂಧಪಟ್ಟವರು ಇತ್ತ ಕಡೆ ಗಮನಹರಿಸಿ ತ್ಯಾಜ್ಯ ವಸ್ತುಗಳನ್ನ ಸ್ಥಳಾಂತರಿಸಿ ಕದ್ದು ಮುಚ್ಚಿ ಕಸ ಎಸೆಯುತ್ತಿದ್ದವರನ್ನು ಕಂಡುಹಿಡಿದು ಅಂಥವರ ಮೇಲೆ ಗ್ರಾಮ ಪಂಚಾಯಿತಿಯವರು ಕ್ರಮ ಜರುಗಿಸಬೇಕೆಂದು ಅಲ್ಲಿನ ಸ್ಥಳೀಯರು ಆಗ್ರಹಿಸಿದ್ದಾರೆ

Edited By : PublicNext Desk
Kshetra Samachara

Kshetra Samachara

19/06/2026 04:11 pm

Cinque Terre

880

Cinque Terre

0

ಸಂಬಂಧಿತ ಸುದ್ದಿ