ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಸಿ: ದಲಿತ ಯುವಕನ ಮೇಲೆ ಹಲ್ಲೆ ಪ್ರಕರಣ; ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಪ್ರತಿಭಟನೆ

ಶಿರಸಿ: ಸಿದ್ದಾಪುರ ತಾಲೂಕಿನ ನಾಣಿಕಟ್ಟಾ ಗ್ರಾಮದಲ್ಲಿ ಶಿರಸಿ ಅರಣ್ಯ ಇಲಾಖೆಯ ಕೆಲವು ಅಧಿಕಾರಿಗಳಿಂದ ಅಮಾಯಕ ದಲಿತ ಯುವಕನ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸಿ

ಹಾಗೂ ತಪ್ಪಿತಸ್ಥ ಅಧಿಕಾರಿಗಳನ್ನು ಈ ಕೂಡಲೇ ಸೇವೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ, 'ಭೀಮ ಘರ್ಜನೆ' ಸಂಘಟನೆ ಹಾಗೂ ಸಮಾನ ಮನಸ್ಕ ದಲಿತ ಪರ ಸಂಘಟನೆಗಳ ವತಿಯಿಂದ ನಗರದ 5ನೇ ರಸ್ತೆಯ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.

ನಂತರ ಪ್ರತಿಭಟನೆ ಮೂಲಕ ಶಿರಸಿ ಡಿಎಫ್ಒ ಕಚೇರಿ ಬಳಿ ನೂರಾರು ಪ್ರತಿಭಟನಾಕಾರರು ವಿಚಾರಣೆ ನೆಪದಲ್ಲಿ ಹಲ್ಲೆ ನಡೆಸಿದ ಕಾನಸೂರ ಸೆಕ್ಷನ್ ಉಪ ವಲಯ ಅರಣ್ಯಾಧಿಕಾರಿ ಕಾರ್ತಿಕ್ ನಾರ್ವೇಕರ, ಬೀಟ್ ಗಾರ್ಡ್ ರೋಹಿತ್ ನಾಯ್ಕ್ ರನ್ನು ಕೂಡಲೇ ಅಮಾನತು ಮಾಡಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ಡಿಎಫ್ಒ ಸಂದೀಪ್ ಸೂರ್ಯವಂಶಿ ಅವರು ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರೂ ಪ್ರತಿಭಟನಾಕಾರರು ತಮ್ಮ ಪಟ್ಟು ಸಡಿಲಿಸದೆ ಹಲವಾರು ತಾಸು ಪ್ರತಿಭಟನೆ ಮಾಡಿದರು. ಕೊನೆಗೆ ಡಿವೈಎಸ್ಪಿ ಗೀತಾ ಪಾಟೀಲ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ ನಂತರ ಡಿಎಫ್ಒ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ ಭೀಮ ಘರ್ಜನೆ ಸಂಘಟನೆ ಜಿಲ್ಲಾಧ್ಯಕ್ಷ ಅರ್ಜುನ ಮಿಂಟಿ, ಉಪಾಧ್ಯಕ್ಷ ಅಮಿತ್ ಜೋಗಳೇಕರ್, ತಾಲೂಕು ಅಧ್ಯಕ್ಷ ಪುನೀತ್ ಮರಾಟೆ, ಶ್ಯಾಮ ದೇಶಬಾಗ್,ನಿವೃತ್ತ ಪಿಎಸ್ಐಗಳಾದ ರಘು ಕಾನಡೆ, ದಿಗಂಬರ ಪಾವಸ್ಕರ್, ಮುಖಂಡರಾದ ಮಹೇಶ್ ನಾಯ್ಕ್, ಸಿದ್ದಾಪುರ, ವಿನಾಯಕ ನಾಯ್ಕ್ ಶಿರಸಿ, ನಗರಸಭೆ ಮಾಜಿ ಸದಸ್ಯ ಯಶವಂತ ಮರಾಟೆ, ಸಿದ್ದಾಪುರದ ದಲಿತ ಮುಖಂಡ ನಂದನ್ ಬೋರ್ಕರ್ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.

Edited By :
PublicNext

PublicNext

17/06/2026 07:59 pm

Cinque Terre

12.67 K

Cinque Terre

0

ಸಂಬಂಧಿತ ಸುದ್ದಿ