ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಟೆ ಹೊತ್ತ ಕಾರ್ಮಿಕನ ಧೈರ್ಯದಿಂದ ಉಳಿಯಿತು ಮೊಬೈಲ್ ರಾಬರಿ ನಡೆದ ಕೆಲವೇ ಕ್ಷಣದಲ್ಲಿ ಕಳ್ಳನ ಸಾವು

ಬೆಂಗಳೂರು: ಅವರು ಖತರ್ನಾಕ್ ಕಳ್ಳರು. ಹಗಲು ಹೊತ್ತಲ್ಲೇ ಮೊಬೈಲ್ ರಾಬರಿಗೆ ಇಳಿದಿದ್ದರು. ಅಂದುಕೊಂಡಂತೆ ಏನೋ ಸಾಧಿಸಿದ್ದರು. ಆದರೆ ಆ ಖುಷಿ ಹೆಚ್ಚು ಹೊತ್ತು ಉಳಿಯಲಿಲ್ಲ. ಮೂಟೆ ಹೊತ್ತು ಬಂದ ಕಾರ್ಮಿಕ ಇವರ ಪ್ಲಾನ್‌ಗೆ ಎಳ್ಳು ನೀರು ಬಿಟ್ಟಿದ್ದ. ಇದು ಒಂದು ಕಡೆ ಆದರೆ. ಘಟನೆ ನಡೆದು ಕೆಲವೇ ನಿಮಿಷದಲ್ಲಿ ಓರ್ವ ಕಳ್ಳ ಕುಸಿದು ಬಿದ್ದು ಉಸಿರು ಚೆಲ್ಲಿದ್ದ. ನಡೆದುಕೊಂಡು ಬರುತ್ತಿದ್ದ ವಕೀಲರ ಮೊಬೈಲ್ ಕದ್ದು ಬೈಕ್‌ನಲ್ಲಿ ಎಸ್ಕೇಪ್ ಆಗುತ್ತಿದ್ದರು. ಈ ವೇಳೆ ಕ್ಷಣಾರ್ಧದಲ್ಲಿ ಮೂಟೆ ಹೊತ್ತು ಬರುತ್ತಿದ್ದ ಕಾರ್ಮಿಕನೊಬ್ಬ ಮೂಟೆಯನ್ನು ಬೈಕ್‌ನ ಮೇಲೆ ಎಸೆದಿದ್ದು ಆರೋಪಿಗಳು ಮೊಬೈಲ್ ಮತ್ತು ಬೈಕ್ ಬಿಟ್ಟು ಎಸ್ಕೇಪ್ ಆಗಿದ್ದಾರೆ.

ಜೂನ್ 15 ರಂದು ಸಂಜೆ 5 ಗಂಟೆಯ ಸಮಯ. ಕಬ್ಬನ್ ಪೇಟೆ 14 ನೇ ಕ್ರಾಸ್ ರಸ್ತೆಯಲ್ಲಿ ವಕೀಲರೊಬ್ಬರು ಫೋನ್‌ನಲ್ಲಿ ಮಾತನಾಡಿಕೊಂಡು ಬರುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಅರ್ಬಾಜ್ ಮತ್ತು ಜುನೈದ್ ಎಂಬ ಯುವಕರು. ಹಗಲು ಹೊತ್ತಲ್ಲೇ ಜನನಿಬಿಡ ಪ್ರದೇಶದಲ್ಲಿ ಮೊಬೈಲ್ ಸ್ನ್ಯಾಚ್ ಮಾಡಿಕೊಂಡು ಬೈಕ್‌ನಲ್ಲಿ ಪರಾರಿ ಆಗಲು ಮುಂದಾಗಿದ್ದಾರೆ. ಆಗ ವಕೀಲ ಕಳ್ಳ ಕಳ್ಳ ಎಂದು ಕಿರುಚಿಕೊಂಡಿದ್ದ. ರಸ್ತೆಯಲ್ಲಿದ್ದವರೆಲ್ಲ ಬೈಕ್ ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ. ಆದರೆ ನಿಲ್ಲಿಸದೇ ಮುಂದೆ ಹೋಗುತ್ತಲೇ ಇದ್ದ ಇದನ್ನು ಗಮನಿಸಿದ್ದ ಮೂಟೆ ಹೊತ್ತು ಬರುತ್ತಿದ್ದ ಕಾರ್ಮಿಕ 60 ಕೆಜಿ ತೂಕದ ಮೂಟೆಯನ್ನು ಬೈಕ್ ಮೇಲೆ ಎಸೆಯುತ್ತಿದ್ದಂತೆ ಆರೋಪಿಗಳು. ಬೈಕ್ ಮತ್ತು ಮೊಬೈಲ್ ಬಿಟ್ಟು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.

ಇದಾದ ಮೇಲೆಯೇ ನೋಡಿ ಶುರುವಾಗಿದ್ದು ಅಸಲಿ ಕಹಾನಿ. ಬೈಕ್ ಬಿಟ್ಟು ಬಂದ ಕಳ್ಳರು ಸ್ಥಳೀಯರನ್ನು ಮಚ್ಚು ತೋರಿಸಿ ಹೆದರಿಸಿದ್ದು ಯಾರು ಕೂಡ ಹತ್ತಿರ ಸುಳಿಯಲೇ ಇಲ್ಲ. ಕೆಲವೇ ಹೊತ್ತಿನ ಬಳಿಕ ಸ್ವಲ್ಪ ದೂರ ಓಡಿ ಬಂದ ಜುನೈದ್‌ಗೆ ಭಯದಿಂದಾಗಿ ತೀವ್ರ ಆಯಾಸ ಉಂಟಾಗಿತ್ತು. ಹಾಗಾಗಿ ಫುಟ್‌ಪಾತ್ ಮೇಲೆ ಕುಳಿತಿದ್ದಾನೆ. ಹೃದಯ ಸಂಬಂಧಿ ಕಾಯಿಲೆಯಿಂದಲೂ ಬಳಲುತ್ತಿದ್ದ ಆತ ಹಾರ್ಟ್ ಅಟ್ಯಾಕ್ ಆಗಿ ಕುಳಿತಲ್ಲಿಯೇ ಕುಸಿದು ಸಾವನ್ನಪ್ಪಿದ್ದಾನೆ.

ಘಟನೆಗೆ ಸಂಬಂಧಪಟ್ಟಂತೆ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಹಲಸೂರು ಗೇಟ್ ಪೊಲೀಸರು ತನಿಖೆ ನಡೆಸುತ್ತಿದ್ದು. ಮತ್ತೋರ್ವ ಆಸಾಮಿ ಅರ್ಬಾಜ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದಕ್ಕೆ ಹೇಳೋದು ಮೈ ಬಗ್ಗಿಸಿ ದುಡಿದು ತಿನ್ನಬೇಕು ಅಂತ. ಅಡ್ಡದಾರಿಯಲ್ಲಿ ಹಣ ಮಾಡಲು ಹೋದವನು ಸತ್ತೇ ಹೋಗಿದ್ದಾನೆ.

Edited By : Manjunath H D
PublicNext

PublicNext

19/06/2026 04:39 pm

Cinque Terre

6.56 K

Cinque Terre

0

ಸಂಬಂಧಿತ ಸುದ್ದಿ