ಬೆಂಗಳೂರು ನಗರದ ವಾರ್ಡ್ ಹಾಗೂ ಸ್ಥಳೀಯ ಮಟ್ಟದ ಒಳರಸ್ತೆಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ₹2,000 ಕೋಟಿ ಹೂಡಿಕೆ ಮಾಡಲು ಮಹತ್ವದ ಹಾಗೂ ತ್ವರಿತ ನಿರ್ಧಾರ ಕೈಗೊಂಡಿದೆ.
ನಗರದ ಪ್ರಮುಖ ರಸ್ತೆಗಳನ್ನು ವಿವಿಧ ಯೋಜನೆಗಳಡಿ ಈಗಾಗಲೇ ಅಭಿವೃದ್ಧಿಪಡಿಸಲಾಗುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ದೈನಂದಿನ ಸಂಚಾರಕ್ಕೆ ಅತ್ಯಂತ ಅಗತ್ಯವಾಗಿರುವ ಒಳರಸ್ತೆಗಳ ಸುಧಾರಣೆಯ ತುರ್ತು ಅಗತ್ಯವನ್ನು ಸರ್ಕಾರ ಮನಗಂಡಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಶಾಸಕರು ಹಾಗೂ ಸಾರ್ವಜನಿಕರಿಂದ ಬಂದಿರುವ ನಿರಂತರ ಬೇಡಿಕೆಗಳಿಗೆ ಸ್ಪಂದಿಸಿ ಈ ಮಹತ್ವದ ಅನುದಾನವನ್ನು ಸರ್ಕಾರ ಮಂಜೂರು ಮಾಡಿದೆ. ಕಾಮಗಾರಿಗಳನ್ನು ಶೀಘ್ರವಾಗಿ ಆರಂಭಿಸಿ ಪೂರ್ಣಗೊಳಿಸುವ ಉದ್ದೇಶದಿಂದ, ಅಲ್ಪಾವಧಿಯ ಟೆಂಡರ್‌ಗಳನ್ನು ಕರೆಯಲು ಸಹ ಸರ್ಕಾರ ಅನುಮತಿ ನೀಡಿದೆ.
ಯಾವುದೇ ಪಕ್ಷಭೇದವಿಲ್ಲದೆ ಬೆಂಗಳೂರಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಸಮಾನವಾಗಿ ಅನುದಾನ ಹಂಚಿಕೆ ಮಾಡಲಾಗಿದ್ದು, ನಗರದ ಸಮಗ್ರ ಮತ್ತು ಸಮಾನ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಪುನರುಚ್ಚರಿಸಿದ್ದಾರೆ.
PublicNext
19/06/2026 04:56 pm
LOADING...