ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಥುರಾ ದೇಗುಲದಲ್ಲಿ ಕೋಟಿ ಅಕ್ರಮ: ಅರ್ಚಕನ ರಕ್ತ ಪತ್ರದಿಂದ UP ರಾಜ್ಯದಲ್ಲಿ ತಲ್ಲಣ

ಲಕ್ನೋ: ಉತ್ತರ ಪ್ರದೇಶದ ಸುಪ್ರಸಿದ್ಧ ಮಥುರಾದ ಶ್ರೀಕೃಷ್ಣ ಜನ್ಮಭೂಮಿ ಮಂದಿರದಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ಆರ್ಥಿಕ ಅಕ್ರಮದ ಸಿಬಿಐ ತನಿಖೆಗೆ ಆಗ್ರಹಿಸಿ, ದೇವಸ್ಥಾನದ ಅರ್ಚಕರೊಬ್ಬರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ತಮ್ಮ ಸ್ವಂತ ರಕ್ತದಲ್ಲಿ ಪತ್ರ ಬರೆದು ರಾಜ್ಯಾದ್ಯಂತ ತಲ್ಲಣ ಮೂಡಿಸಿದ್ದಾರೆ.

ಮಥುರಾದ ಶ್ರೀಕೃಷ್ಣ ಜನ್ಮಭೂಮಿ ದೇವಸ್ಥಾನದಲ್ಲಿ ಕೋಟ್ಯಂತರ ರೂಪಾಯಿಗಳ ಆರ್ಥಿಕ ಅಕ್ರಮ ನಡೆದಿರುವ ಗಂಭೀರ ಆರೋಪ ಕೇಳಿಬಂದಿದೆ. ದೇವಸ್ಥಾನದ ಅರ್ಚಕ ದಿನೇಶ್ ಫಲ್ಹಾರಿ ಅವರು, ಮಂದಿರದ ವ್ಯವಸ್ಥಾಪನಾ ಸಮಿತಿಯ ಸದಸ್ಯರು ಭಕ್ತರು ನೀಡಿದ ದೇಣಿಗೆ ಹಣ ಮತ್ತು ಚಿನ್ನಾಭರಣಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದಾರೆ.

ಸಿಎಂಗೆ ರಕ್ತದಲ್ಲಿ ಪತ್ರ, ಸಿಬಿಐ ತನಿಖೆಗೆ ಆಗ್ರಹ

ಈ ಬೃಹತ್ ಹಗರಣದ ಬಗ್ಗೆ ಕೇಂದ್ರೀಯ ತನಿಖಾ ದಳ (CBI) ತನಿಖೆ ನಡೆಸಬೇಕು ಎಂದು ಆಗ್ರಹಿಸಿರುವ ಅರ್ಚಕ ದಿನೇಶ್ ಫಲ್ಹಾರಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ತಮ್ಮ ಸ್ವಂತ ರಕ್ತದಲ್ಲಿ ಪತ್ರ ಬರೆದಿದ್ದಾರೆ. ದೇವಸ್ಥಾನಕ್ಕೆ ಭಕ್ತರು ಅರ್ಪಿಸಿದ ಕಾಣಿಕೆ ಮತ್ತು ಅಮೂಲ್ಯ ಆಭರಣಗಳ ದುರುಪಯೋಗದ ಕುರಿತು ರಾಜ್ಯ ಸರ್ಕಾರ ತಕ್ಷಣವೇ ಸೂಕ್ತ ತನಿಖೆಗೆ ಆದೇಶಿಸಬೇಕು ಎಂದು ಅವರು ಪತ್ರದಲ್ಲಿ ಪ್ರಬಲವಾಗಿ ಒತ್ತಾಯಿಸಿದ್ದಾರೆ.

ನ್ಯಾಯಾಂಗ ಹೋರಾಟದ ಎಚ್ಚರಿಕೆ

ಈ ವಿಷಯದಲ್ಲಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ತಾವು ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿ ನ್ಯಾಯಾಂಗ ತನಿಖೆಗೆ ಒತ್ತಾಯಿಸುವುದಾಗಿ ಅರ್ಚಕರು ಎಚ್ಚರಿಕೆ ನೀಡಿದ್ದಾರೆ. ಇತ್ತ, ಇಡೀ ರಾಜ್ಯಾದ್ಯಂತ ತಲ್ಲಣ ಮೂಡಿಸಿರುವ ಈ ಗಂಭೀರ ಆರ್ಥಿಕ ಅಕ್ರಮದ ಆರೋಪಗಳ ಕುರಿತು ದೇವಸ್ಥಾನದ ಆಡಳಿತ ಮಂಡಳಿ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

Edited By : Vijay Kumar
PublicNext

PublicNext

19/06/2026 05:10 pm

Cinque Terre

6.77 K

Cinque Terre

0

ಸಂಬಂಧಿತ ಸುದ್ದಿ