ಬ್ರಹ್ಮಾವರ: ವರ್ಷದಿಂದ ವರ್ಷಕ್ಕೆ ಕರಾವಳಿ ಜಿಲ್ಲೆಯಲ್ಲಿ ಮುಂಗಾರು ಮಳೆಯ ಲೆಕ್ಕಾಚಾರ ವ್ಯತ್ಯಾಸವಾಗುತ್ತಲೇ ಹೋಗುತ್ತಿದ್ದು ಕಳೆದ ವರ್ಷ ಜೂನ್ ತಿಂಗಳಲ್ಲಿ ನದಿ ತೊರೆಗಳು, ಹಳ್ಳಕೊಳ್ಳಗಳು ತುಂಬಿ ಹರಿದು ಕೃಷಿಚಟುವಟಿಕೆ ಭತ್ತದ ಬೆಳೆ ತೆಗೆಯುವ ರೈತರು ಭೂಮಿಯನ್ನು ಹದಗೊಳಿಸಿ ಪ್ರತಿ ವರ್ಷದಂತೆ ಈ ವರ್ಷವೂ ಸಿದ್ಧತೆಯಲ್ಲಿ ಇದ್ದರೆ ಇನ್ನೂ ಮಳೆ ಸರಿಯಾಗಿ ಇಲ್ಲದೆ ಬಹುತೇಕ ಗದ್ದೆಗಳು ನೀರು ಇಲ್ಲದೆ ಒಣಗಿರುವುದು ಕಂಡು ಬರುತ್ತದೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ನದಿ ತೀರದ ಪ್ರದೇಶವಾದ ಕೂರಾಡಿ, ಬಾರಕೂರು, ಉಪ್ಪೂರು, ಹಂದಾಡಿ, ನೀಲಾವರ ಪ್ರದೇಶದಲ್ಲಿ ಇಷ್ಟರಲ್ಲೇ ನಾಟಿ ಕಾರ್ಯ ಆರಂಭಗೊಳ್ಳುತ್ತಿದ್ದರೆ ಈ ವರ್ಷ ಇನ್ನೂ ಉಳುಮೆ ಮಾಡದೆ ಗದ್ದೆಗಳು ಬಂಜರಿನಂತೆ ಕಾಣುತ್ತಿದೆ.
ಯಾಂತ್ರಿಕ ಕೃಷಿ, ಸಾಂಪ್ರದಾಯಕ ಕೃಷಿ ಯಾವುದೇ ಮಾಡಲು ಸಮಯಕ್ಕೆ ಸರಿಯಾಗಿ ಮಳೆ ಬಂದು ನೀರು ಶೇಖರಣೆಗೊಂಡರೆ ಮಾತ್ರವೇ ಭತ್ತದ ಕೃಷಿ ಸೇರಿದಂತೆ ಯಾವುದೇ ಕೃಷಿಗಳಿಗೂ ಕೂಡಾ ಉಪಯುಕ್ತವಾಗುತ್ತಿದ್ದು ಜೂನ್ 20 ರ ತನಕವೂ ಮಳೆ ಸರಿಯಾಗಿ ಬಾರದೆ ಬಿತ್ತನೆ ಮಾಡಿದ ಬೀಜ ನಾಟಿ ಮಾಡಿದ ಕೃಷಿ ಎಲ್ಲದಕ್ಕೂ ಬಿಸಿಲ ಬೇಗೆಯಿಂದ ಬೆಂದುಹೋಗಿರುವುದು ಕಾಣುತ್ತಿದ್ದು ಹೀಗೆ ಮುಂದುವರಿದರೆ ಭತ್ತದ ಬೆಳೆಗಾರರಿಗೆ ತೀರಾ ಸಂಕಷ್ಟ ಎದುರಾಗಲಿದೆ.
- ಶಿವರಾಮ ಆಚಾರ್ಯ ಪಬ್ಲಿಕ್ ನೆಕ್ಸ್ಟ್ ಬ್ರಹ್ಮಾವರ
PublicNext
19/06/2026 05:44 pm
LOADING...