ಉಡುಪಿ: ಹಿರಿಯ ಛಾಯಾ ಚಿತ್ರ ಪತ್ರಕರ್ತ ಹಾಗೂ ಅಂತರರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕ ಅಸ್ಟ್ರೋ ಮೋಹನ್ ಅವರಿಗೆ ವಿಶ್ವದ ಅತ್ಯಂತ ಪ್ರತಿಷ್ಠಿತ ಛಾಯಾಗ್ರಹಣ ಸಂಸ್ಥೆಗಳಲ್ಲಿ ಒಂದಾದ ಫೋಟೋಗ್ರಫಿ ಸೊಸೈಟಿ ಆಫ್ ಅಮೆರಿಕದ (ಪಿಎಸ್‌ಎ) ಪ್ರತಿಷ್ಠಿತ ಪಿಪಿಎಸ್ಎ (ಪ್ರೊಫಿಷಿಯನ್ಸಿ ಫೋಟೋಗ್ರಾಫಿಕ್ ಸೊಸೈಟಿ ಆಫ್ ಅಮೆರಿಕಾ) ಗೌರವವನ್ನು ಪ್ರದಾನ ಮಾಡಲಾಗಿದೆ.
ವಿಶ್ವದಾದ್ಯಂತ ಪಿಎಸ್‌ಎ ಮಾನ್ಯತೆ ಪಡೆದ ಅಂತರರಾಷ್ಟ್ರೀಯ ಛಾಯಾಚಿತ್ರ ಪ್ರದರ್ಶನಗಳು ಹಾಗೂ ಸ್ಪರ್ಧೆಗಳಲ್ಲಿ ನಿರಂತರವಾಗಿ ಉತ್ಕೃಷ್ಟ ಸಾಧನೆ ಮತ್ತು ಗಮನಾರ್ಹ ಯಶಸ್ಸು ದಾಖಲಿಸಿರುವ ಛಾಯಾಗ್ರಾಹಕರಿಗೆ ಈ ಗೌರವವನ್ನು ನೀಡಲಾಗುತ್ತದೆ.
ಮೂರು ದಶಕಗಳಿಗೂ ಅಧಿಕ ಅವಧಿಯಿಂದ ಛಾಯಾ ಚಿತ್ರ ಪತ್ರಿಕೋದ್ಯಮ ಹಾಗೂ ದೃಶ್ಯ ಕಥನ ಕ್ಷೇತ್ರದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ಅಸ್ಟ್ರೋ ಮೋಹನ್ ಅವರು ಕರ್ನಾಟಕದ ಹೆಸರಾಂತ ಛಾಯಾಗ್ರಾಹಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಸಮಾಜದ ವಿವಿಧ ಆಯಾಮಗಳು, ಮಹತ್ವದ ಘಟನೆಗಳು, ಮಾನವೀಯ ಬದುಕಿನ ಸ್ಪಂದನೆಗಳು, ಸಂಸ್ಕೃತಿ, ಆಧ್ಯಾತ್ಮಿಕತೆ, ಕ್ರೀಡೆ ಹಾಗೂ ಸಾಮಾಜಿಕ ವಾಸ್ತವಗಳನ್ನು ತಮ್ಮ ಛಾಯಾಚಿತ್ರಗಳ ಮೂಲಕ ದಾಖಲಿಸಿರುವ ಅವರು, ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರದರ್ಶನಗಳಲ್ಲಿ ಪ್ರಶಂಸೆ ಹಾಗೂ ಮಾನ್ಯತೆ ಗಳಿಸಿದ್ದಾರೆ.
ಫೋಟೋಗ್ರಫಿ ಸೊಸೈಟಿ ಆಫ್ ಅಮೆರಿಕದ ಈ ಪ್ರತಿಷ್ಠಿತ ಗೌರವವು ಕರ್ನಾಟಕದ ಅತ್ಯಲ್ಪ ಪತ್ರಿಕಾ ಛಾಯಾಗ್ರಾಹಕರು ಪಡೆದಿರುವುದು ಈ ಸಾಧನೆಗೆ ಇನ್ನಷ್ಟು ಮಹತ್ವವನ್ನು ತಂದುಕೊಟ್ಟಿದೆ.
PublicNext
18/06/2026 10:52 am
LOADING...