ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: 'ಇಟಲಿ ಯಾರ ಮುಂದೆಯೂ ಭಿಕ್ಷೆ ಬೇಡುವುದಿಲ್ಲ!': ಟ್ರಂಪ್ ಹೇಳಿಕೆಗೆ ಇಟಲಿ ಸುಂದರಿ ಮೆಲೋನಿ ಖಡಕ್ ಕೌಂಟರ್, ತಾರಕಕ್ಕೇರಿದ ಜಗಳ!

ರೋಮ್/ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನಡುವಿನ ವಾಕ್ಸಮರ ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿದೆ. ಟ್ರಂಪ್ ಅವರು ಇಟಲಿ ಪ್ರಧಾನಿ ಮೆಲೋನಿ ಕುರಿತು ಸಾರ್ವಜನಿಕವಾಗಿ ಆಡಿರುವ ಮಾತುಗಳು ಈಗ ಎರಡು ದೇಶಗಳ ನಡುವಿನ ರಾಜತಾಂತ್ರಿಕ ಯುದ್ಧಕ್ಕೆ ಕಾರಣವಾಗಿದೆ ಎಂದು ಇಟಲಿಯ ಖ್ಯಾತ ಪತ್ರಕರ್ತ ಆಂಟೋನೆಲ್ಲೊ ಗೆರೆರಾ ವರದಿ ಮಾಡಿದ್ದಾರೆ

'ಲಾ7' (La7) ಟಿವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಡೊನಾಲ್ಡ್ ಟ್ರಂಪ್, "ಜಿ7 (G7) ಶೃಂಗಸಭೆಯ ಸಂದರ್ಭದಲ್ಲಿ ಜಾರ್ಜಿಯಾ ಮೆಲೋನಿ ನನ್ನೊಂದಿಗೆ ಒಂದು ಫೋಟೋ ತೆಗೆದುಕೊಳ್ಳಲು ನನ್ನ ಬಳಿ ಬಂದು ಬೇಡಿಕೊಂಡಿದ್ದರು (Begged). ಆಕೆಯನ್ನು ನೋಡಿ ನನಗೆ ತುಂಬಾ ಪಶ್ಚಾತ್ತಾಪ ಮತ್ತು ಕರುಣೆ ಎನಿಸಿತು," ಎಂದು ಲೇವಡಿ ಮಾಡಿದ್ದರು. ಟ್ರಂಪ್ ಅವರ ಈ ಅಹಂಕಾರದ ಮಾತುಗಳು ಇಟಲಿ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಟ್ರಂಪ್ ಹೇಳಿಕೆಗೆ ಅತ್ಯಂತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, "ಟ್ರಂಪ್ ಆಡಿರುವ ಮಾತುಗಳು ಸಂಪೂರ್ಣವಾಗಿ ಸೃಷ್ಟಿ ಮಾಡಿರುವುದು ಮತ್ತು ಸುಳ್ಳು. ನಾನಾಗಲಿ ಅಥವಾ ಇಟಲಿ ದೇಶವಾಗಲಿ ಯಾರ ಮುಂದೆಯೂ ಎಂದಿಗೂ ಭಿಕ್ಷೆ ಬೇಡುವುದಿಲ್ಲ," ಎಂದು ಕಡಕ್ ಆಗಿ ಉತ್ತರಿಸಿದ್ದಾರೆ. ಅಷ್ಟೇ ಅಲ್ಲದೆ, ಪಾಶ್ಚಿಮಾತ್ಯ ದೇಶಗಳ ಶತ್ರುಗಳ ವಿರುದ್ಧ ಹೋರಾಡುವ ವಿಷಯದಲ್ಲಿ ಟ್ರಂಪ್ ಅವರ ಮನಸ್ಥಿತಿಯನ್ನು ಮೆಲೋನಿ ಇದೇ ವೇಳೆ ತೀವ್ರವಾಗಿ ಟೀಕಿಸಿದ್ದಾರೆ.

ಈ ಘಟನೆಯ ಬೆನ್ನಲ್ಲೇ ಇಟಲಿಯ ವಿದೇಶಾಂಗ ಸಚಿವರು ತಮ್ಮ ನಿಗದಿತ ಅಮೆರಿಕ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಇತ್ತ ಇಟಲಿ ಅಧ್ಯಕ್ಷ ಸೆರ್ಗಿಯೋ ಮಟ್ಟರೆಲ್ಲಾ ಅವರು ಪ್ರಧಾನಿ ಮೆಲೋನಿ ಪರವಾಗಿ ನಿಂತಿದ್ದು, ಅವರಿಗೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ಇಬ್ಬರು ಪ್ರಮುಖ ಜಾಗತಿಕ ನಾಯಕರ ನಡುವಿನ ಜಗಳ ಇದೀಗ ಅಮೆರಿಕ ಮತ್ತು ಇಟಲಿ ನಡುವಿನ ದ್ವಿಪಕ್ಷೀಯ ಸಂಬಂಧದ ಮೇಲೆ ದಟ್ಟವಾದ ಕಾರ್ಮೋಡ ಕವಿಯುವಂತೆ ಮಾಡಿದೆ.

Edited By : Nagaraj Tulugeri
PublicNext

PublicNext

19/06/2026 09:37 pm

Cinque Terre

6.7 K

Cinque Terre

1

ಸಂಬಂಧಿತ ಸುದ್ದಿ