ಲಂಡನ್ : ಬ್ರಿಟನ್‌ನ ಲಂಡನ್ ನಗರದ ಉತ್ತರಕ್ಕಿರುವ ಬೆಡ್‌ಫೋರ್ಡ್ ಪ್ರದೇಶದ ಸಮೀಪ ಶುಕ್ರವಾರ ಎರಡು ಪ್ಯಾಸೆಂಜರ್ ರೈಲುಗಳು ಪರಸ್ಪರ ಡಿಕ್ಕಿ ಹೊಡೆದಿವೆ.
ಈ ಭೀಕರ ಅಪಘಾತದಲ್ಲಿ ಓರ್ವ ರೈಲು ಚಾಲಕ ಸಾವನ್ನಪ್ಪಿದ್ದು, 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಅಪಘಾತಕ್ಕೀಡಾದ ಎರಡೂ ರೈಲುಗಳು ಲಂಡನ್‌ನ ಸೇಂಟ್ ಪ್ಯಾಂಕ್ರಾಸ್ ನಿಲ್ದಾಣದತ್ತ ದಕ್ಷಿಣ ದಿಕ್ಕಿನಲ್ಲಿ ಸಂಚರಿಸುತ್ತಿದ್ದವು. ಶುಕ್ರವಾರ ಸಂಜೆ ಸುಮಾರು 5:15ರ ಸುಮಾರಿಗೆ ಬೆಡ್‌ಫೋರ್ಡ್ ಪಟ್ಟಣದ ಹೊರವಲಯದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ, ತುರ್ತು ಸೇವಾ ಸಿಬ್ಬಂದಿ, ಅಗ್ನಿಶಾಮಕ ದಳ, ಆಂಬುಲೆನ್ಸ್ ತಂಡಗಳು ಹಾಗೂ ಏರ್ ಆಂಬುಲೆನ್ಸ್ ಸ್ಥಳಕ್ಕೆ ಧಾವಿಸಿವೆ. ರಕ್ಷಣಾ ಕಾರ್ಯಾಚರಣೆ ತೀವ್ರಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು.
ರೈಲ್ವೆ, ಸಮುದ್ರ ಮತ್ತು ಸಾರಿಗೆ ಕಾರ್ಮಿಕರ ರಾಷ್ಟ್ರೀಯ ಒಕ್ಕೂಟ (RMT) ಪ್ರಧಾನ ಕಾರ್ಯದರ್ಶಿ ಎಡ್ಡಿ ಡೆಂಪ್ಸಿ ಅವರು, ಮೃತಪಟ್ಟ ವ್ಯಕ್ತಿ ರೈಲು ಚಾಲಕ ಎಂದು ದೃಢಪಡಿಸಿದ್ದಾರೆ. ಅಪಘಾತದಲ್ಲಿ ರೈಲು ಸಿಬ್ಬಂದಿ ಹಾಗೂ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿರುವ ವರದಿಗಳ ಹಿನ್ನೆಲೆಯಲ್ಲಿ, ಆರ್‌ಎಂಟಿ ಒಕ್ಕೂಟವು ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿರುವುದಾಗಿ ತಿಳಿಸಿದೆ.
PublicNext
20/06/2026 08:03 am
LOADING...