ಬೆಂಗಳೂರು : ರಾಜಧಾನಿಯ ಮೆಟ್ರೋ ಕಾಮಗಾರಿಗಳ ವೇಗ ಹೆಚ್ಚಿಸಲು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಬಿಎಂಆರ್ಸಿಎಲ್ (BMRCL) ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಗಡುವು ನೀಡಿದ್ದಾರೆ.
ಶಾಂತಿನಗರದ ಮುಖ್ಯ ಕಚೇರಿಯಲ್ಲಿ ಸಭೆ ನಡೆಸಿದ ಸಚಿವರು, 2028ರ ಮಾರ್ಚ್ ವೇಳೆಗೆ ಬೆಂಗಳೂರು ಮೆಟ್ರೋ ಜಾಲವನ್ನು 175 ಕಿ.ಮೀ.ಗೆ ವಿಸ್ತರಿಸುವ ಗುರಿ ಘೋಷಿಸಿದರು.
ಸಚಿವರ ಹೊಸ ಡೆಡ್‌ಲೈನ್ ಪ್ರಕಾರ, ಆಗಸ್ಟ್ 15ರೊಳಗೆ ಪಿಂಕ್ ಲೈನ್‌ನ 6 ನಿಲ್ದಾಣಗಳು ಸಾರ್ವಜನಿಕ ಮುಕ್ತವಾಗಬೇಕಿದೆ. ಇನ್ನುಳಿದ 12 ಅಂಡರ್ ಗ್ರೌಂಡ್ ಸ್ಟೇಷನ್‌ಗಳನ್ನು ಮಾರ್ಚ್ 2027ರೊಳಗೆ ಮುಗಿಸಲು ಆದೇಶಿಸಲಾಗಿದೆ.
ಅಕ್ಟೋಬರ್‌ನಲ್ಲಿ ಬ್ಲೂ ಲೈನ್‌ನ ಮಾರತಹಳ್ಳಿ ಭಾಗದಲ್ಲಿ ಟ್ರಯಲ್ ರನ್ ಹಾಗೂ ಮುಂದಿನ ವರ್ಷ ಜೂನ್‌ನಲ್ಲಿ ಹೆಬ್ಬಾಳ-ಏರ್‌ಪೋರ್ಟ್ ಮಾರ್ಗ ಆರಂಭಿಸಲು ಪ್ಲ್ಯಾನ್ ಮಾಡಲಾಗಿದೆ.
PublicNext
20/06/2026 01:46 pm
LOADING...