ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಶಿಥಿಲಾವಸ್ಥೆಯಲ್ಲಿರುವ ಕಿರು ಸೇತುವೆ ದುರಸ್ತಿ ಮಾಡುವಂತೆ ಆಗ್ರಹ -ಸತೀಶ್ ಕಂಚುಗೋಡು

ಕುಂದಾಪುರ: ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಜ್ಜಾಡಿ ಗ್ರಾಮದ ಕೊಡಪಾಡಿಯಲ್ಲಿರುವ ತ್ರಾಸಿ ಗಂಗೊಳ್ಳಿ ಮುಖ್ಯ ರಸ್ತೆಯ ಕಿರು ಸೇತುವೆ ಶಿಥಿಲಾವಸ್ಥೆಯಲ್ಲಿದ್ದು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಇತ್ತ ಕಡೆ ಗಮನ ಹರಿಸಿ ದುರಸ್ತಿ ಮಾಡುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷರಾದ ಸತೀಶ್ ಕಂಚುಗೋಡು ಅವರು ಆಗ್ರಹಿಸಿದ್ದಾರೆ.

ಈ ಸೇತುವೆಯು ಬಹಳಷ್ಟು ವರ್ಷದ ಹಳೆಯ ಸೇತುವೆಯಾಗಿದ್ದು ದಿನನಿತ್ಯ ಗಂಗೊಳ್ಳಿಯಿಂದ ಕುಂದಾಪುರ, ಬೈಂದೂರು ಕಡೆಗೆ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ಸಾವಿರಾರು ವಾಹನಗಳು ಸಂಚರಿಸುವ ಮುಖ್ಯ ಮಾರ್ಗ ಇದಾಗಿದ್ದು ಈ ಭಾಗದಲ್ಲಿ ಅತಿ ದೊಡ್ಡ ಬಂದರಿನಲ್ಲೊಂದಾದ ಗಂಗೊಳ್ಳಿ ಮೀನುಗಾರಿಕಾ ಬಂದರನ್ನು ಸಂಪರ್ಕಿಸುವ ಮುಖ್ಯ ರಸ್ತೆ ಇದಾಗಿರುತ್ತದೆ. ಈಗ ಮಳೆಗಾಲ ಆಗಿರುವುದರಿಂದ ಮಳೆಯ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿರುತ್ತದೆ ಸೇತುವೆ ಕೆಳಭಾಗದಲ್ಲಿರುವ ತಳಪಾಯದ ಕಲ್ಲುಗಳು ಜಾರಿರುವುದರಿಂದ ಸೇತುವೆ ಕುಸಿಯುವ ಭೀತಿ ಹೆಚ್ಚಾಗಿರುತ್ತದೆ. ಇದರಿಂದ ಜನರು ಆತಂಕದ ಪರಿಸ್ಥಿತಿ ಎದುರಿಸುವಂತಾಗಿದೆ. ಆದ್ದರಿಂದ ದೊಡ್ಡ ಅನಾಹುತಗಳು ಸಂಭವಿಸುವ ಮುಂಚೆ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದೆ.

ವರದಿ: ದಾಮೋದರ ಮೊಗವೀರ ನಾಯಕವಾಡಿ, ಪಬ್ಲಿಕ್ ನೆಕ್ಸ್ಟ್, ಬೈಂದೂರು

Edited By : Manjunath H D
PublicNext

PublicNext

20/06/2026 05:57 pm

Cinque Terre

7.52 K

Cinque Terre

0

ಸಂಬಂಧಿತ ಸುದ್ದಿ