ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡುಬಿದ್ರಿಯಲ್ಲಿ ಬಸ್ ಚಾಲಕ ನಿರ್ವಾಹಕರ ಗೂಂಡಾಗಿರಿ ? ಹೆದ್ದಾರಿಗೆ ಅಡ್ಡವಾಗಿ ಬಸ್ ನಿಲ್ಲಿಸಿ ದರ್ಪ !

ಪಡುಬಿದ್ರಿ : ಎರಡು ಖಾಸಗಿ ಬಸ್ ಗಳ ಚಾಲಕರು ಹಾಗೂ ನಿರ್ವಾಹಕರ ಮಧ್ಯೆ ಓವರ್ ಟೇಕ್ ವಿಚಾರಕ್ಕೆ ಮನಸ್ತಾಪ ಉಂಟಾಗಿ ಪಡುಬಿದ್ರಿ ಮುಖ್ಯ ಪೇಟೆಯಲ್ಲಿ ಬಸ್ ನ್ನು ಹೆದ್ದಾರಿಗಡ್ಡವಾಗಿ ನಿಲ್ಲಿಸಿ ಹೊಡೆದಾಡಿಕೊಂಡ ಘಟನೆ ನಡೆದಿದ್ದು ಆಕ್ರೋಶಕ್ಕೆ ಕಾರಣವಾಗಿದೆ.

ಪಡುಬಿದ್ರಿ ಪೇಟೆಯಲ್ಲಿ ಬಸ್ ಚಾಲಕರ ನಿರ್ವಾಹಕರ ಇಂತಹ ವರ್ತನೆ ಇದು ಮೊದಲಲ್ಲ, ಈ ಹಿಂದೆಯೂ ಹಲವು ಬಾರಿ ನಡೆದಿದ್ದು, ಮತ್ತೆ ಮರುಕಳಿಸುವ ಮೂಲಕ ಕಾನೂನು ಸುವ್ಯವಸ್ಥೆಯ ಬಗ್ಗೆ ಜನರು ಪ್ರಶ್ನಿಸುವಂತಾಗಿದೆ. ಈ ಬಾರಿ ಬಸ್ ಚಾಲಕ ನಿರ್ವಾಹಕರ ದುರ್ವರ್ತನೆಯ ವಿರುದ್ಧ ಪೊಲೀಸರ ಮುಂದೆಯೇ ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.

ಘಟನೆಯಿಂದಾಗಿ ಕೆಲ ಹೊತ್ತು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತಲ್ಲದೆ ಸಾರ್ವಜನಿಕರಿಗೂ ತೊಂದರೆ ಉಂಟಾಯಿತು. ದರ್ಪ ತೋರಿದ ಬಸ್ ಚಾಲಕ ನಿರ್ವಾಹಕರಿಗೆ ಎಚ್ಚರಿಕೆ ನೀಡಿ ಕಳಿಸಲಾಯಿತು.

Edited By :
PublicNext

PublicNext

20/06/2026 01:48 pm

Cinque Terre

10.89 K

Cinque Terre

0

ಸಂಬಂಧಿತ ಸುದ್ದಿ