ಮಂಗಳೂರು: ಟ್ರೇಡಿಂಗ್ ಮಾಡಿದರೆ ಎರಡು ಪಟ್ಟು ಲಾಭ ಪಡೆಯಬಹುದು ಎಂದು ನಂಬಿಸಿ 4 ಲಕ್ಷ ರೂ. ವಂಚಿಸಿರುವ ಬಗ್ಗೆ ನಗರದ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎ.29ರಂದು ಫರಲಾನ್ ಅರಾನ ಎಂಬ ಹೆಸರಿನ ಅಪರಿಚಿತ ವ್ಯಕ್ತಿಯಿಂದ ನನಗೆ ವಾಟ್ಸ್ಆಪ್ ಸಂದೇಶ ಬಂದಿತ್ತು. ಅದರಲ್ಲಿ ಟ್ರೇಡಿಂಗ್ ಆ್ಯಪ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಎರಡು ಪಟ್ಟು ಲಾಭ ಮಾಡಬಹುದು ಎಂದು ಬರೆಯಲಾಗಿತ್ತು. ಅದರಂತೆ ತಾನು ಟ್ರೇಡಿಂಗ್ ಗ್ರೂಪಿಗೆ ಸೇರ್ಪಡೆಗೊಂಡಿದ್ದೆ. ಬಳಿಕ ಅವರ ಸೂಚನೆಯಂತೆ ಎ.29ರಂದು 50 ಸಾವಿರ ರೂ. ಮತ್ತು ಮೇ 1ರಂದು 50 ಸಾವಿರ ರೂ. ಹಾಗೂ ಮೇ 3 ರಂದು 4 ಲಕ್ಷ ರೂ. ಗಳನ್ನು ಅವಿಯರ್ ಎಂಟರ್‌ಪ್ರೆಸಸ್ ಸಂಸ್ಥೆಯ ಖಾತೆಗೆ ಪಾವತಿ ಮಾಡಿದ್ದೆ. ಮೇ 7ರಂದು ತನ್ನ ಸ್ನೇಹಿತನಿಗೆ ಈ ಬಗ್ಗೆ ತಿಳಿಸಿದಾಗ ತಾನು ಮೋಸ ಹೋಗಿರುವುದು ತಿಳಿಯಿತು. ಆದಾಗ್ಯೂ ಹಣ ಮರಳಿ ಪಡೆಯಲು ಪ್ರಯತ್ನಿಸಿದೆ. ಅದರಂತೆ 1 ಲಕ್ಷ ರೂ. ವಾಪಸ್ ಬಂದಿದೆ. ಉಳಿದ 4 ಲಕ್ಷ ಹಿಂಪಡೆಯಲು ಸಾಧ್ಯವಾಗಿಲ್ಲ. ಆ ಹಣವನ್ನು ವಾಪಸ್ ಮಾಡುವಂತೆ ಸಂದೇಶ ಕಳುಹಿಸಿದಾಗ ವಾಟ್ಸ್‌ಆಪ್ ಗ್ರೂಪ್ ಮತ್ತು ಟ್ರೇಡಿಂಗ್ ಆ್ಯಪ್ ಬ್ಲಾಕ್ ಆಗಿದೆ ಎಂದು 62ರ ಹರೆಯದ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.
Kshetra Samachara
20/06/2026 09:00 pm
LOADING...