ಬ್ರಹ್ಮಾವರ: ಮೆಸ್ಕಾಂ ಖಾಸಗೀಕರಣದ ಕುರಿತಂತೆ ಮಾಹಿತಿಯನ್ನು ಸರಕಾರಕ್ಕೆ ಆಕ್ಷೇಪಣ ಪತ್ರವನ್ನು ನೀಡುವಂತೆ ಮೆಸ್ಕಾಂ ನೌಕರರ ಸಂಘದ ವತಿಯಿಂದ ಮಾಜಿ ಸಂಸದ ಹಾಗೂ ಸಚಿವರಾದ ಕೆ ಜಯಪ್ರಕಾಶ ಹೆಗ್ಡೆ ಅವರಿಗೆ ಮೆಸ್ಕಾಂ ನೌಕರರ ಸಂಘದ ವತಿಯಿಂದ ಅವರ ಕಛೇರಿಯಲ್ಲಿ ಮನವಿ ನೀಡಲಾಯಿತು.
ಮನವಿಯನ್ನು ಪರಿಶೀಲನೆ ಮಾಡಿದ ಕೆ ಜಯಪ್ರಕಾಶ ಹೆಗ್ಡೆಯವರು ಬಳಿಕ ಅವರು ಮಾತನಾಡಿ ಮನವಿಯ ಕುರಿತು ಇಂಧನ ಸಚಿವರಿಗೆ ಮತ್ತು ಮುಖ್ಯಮಂತ್ರಿಗಳ ಜೊತೆ ಮುಖತ: ಭೇಟಿಯಾಗಿ ಮಾತುಕತೆ ನಡೆಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ನೌಕರರ ಸಂಘದ ಉಡುಪಿಯ ಎನ್ ನವೀನ್ ಕುಮಾರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಬ್ರಹ್ಮಾವರ ಸತೀಶ ಹೆಚ್ , ಎಸಿ ಎಸ್ ಟಿ ಕಲ್ಯಾಣ ಸಂಸ್ಥೆಯ ಸುರೇಶ ಬಾಬು,ಚಂದ್ರಶೇಖರ ರಾತೋಡ್,ಕೋಟ ವಿಭಾಗದ ನೌಕರರ ಸಂಘದ ಅಧ್ಯಕ್ಷ ದಿನೇಶ ಪುತ್ರನ್ ವಿಠಲವಾಡಿ, ಬ್ರಹ್ಮಾವರ ನೌಕರರ ಸಂಘದ ಅಧ್ಯಕ್ಷ ರಾಘವೇಂದ್ರ ಶೆಟ್ಟಿಗಾರ, ಕಾರ್ಯದರ್ಶಿ ವೈ ಸಂತೋಷ ಕುಮಾರ,ಮೇಲ್ವಿಚಾರಕ ಸಂತೋಷ ದೇವಾಡಿಗ ಹಾಗೂ ನೌಕರರ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಸ್ಲಗ್: ಮೆಸ್ಕಾಂ ನೌಕರ ಸಂಘದಿಂದ ಮಾಜಿ ಸಂಸದ ಹಾಗೂ ಸಚಿವ ಕೆ ಜಯಪ್ರಕಾಶ ಹೆಗ್ಡೆಗೆ ಮನವಿ
Kshetra Samachara
20/06/2026 07:03 pm
LOADING...