ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಪಂಜಿನಡ್ಕ ಶಾಲೆಯಲ್ಲಿ ನಶಾಮುಕ್ತ ಭಾರತ ಅಭಿಯಾನ ಸಪ್ತಾಹ ಆಚರಣೆ

ಮುಲ್ಕಿ: ಕೇಂದ್ರ ಸರಕಾರದ ನಶಾಮುಕ್ತ ಭಾರತ ಅಭಿಯಾನ ಯೋಜನೆಯಡಿ ನಶಾಮುಕ್ತ ಭಾರತ ಅಭಿಯಾನ ಸಪ್ತಾಹ ಆಚರಣೆ ಪಂಜಿನಡ್ಕ ಅನುದಾನಿತ ಕೆ.ಪಿ.ಎಸ್‌.ಕೆ.ಸ್ಮಾರಕ ಪ್ರೌಢಶಾಲೆಯಲ್ಲಿ ನಡೆಯಿತು.

ಇದೇ ಸಂದರ್ಭ ದೇಶವನ್ನು ಮಾದಕ ವ್ಯಸನದಿಂದ ಮುಕ್ತಗೊಳಿಸಲು ನಮ್ಮ ಕೈಯಲ್ಲಾದಷ್ಟು ಸಾಧ್ಯವಿರುವ ಸತತ ಪ್ರಯತ್ನವನ್ನು ಮಾಡುತ್ತೇನೆಂದು ಶಾಲೆಯ ವಿದ್ಯಾರ್ಥಿಗಳು ಪ್ರತಿಜ್ಞೆ ಮಾಡಿದರು ಮತ್ತು ಮಾದಕ ವ್ಯಸನದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಕ್ಕಳಿಂದ ರಚಿತವಾದ ತಂಬಾಕು ನಿಂದ ಆಗುವ ದುಷ್ಪರಿಣಾಮ ಮೂಡಿಸುವ ಕಲಾಕೃತಿಯನ್ನು ಹಾಗೂ ಸಿಗರೇಟ್ ಸೇವನೆಯಿಂದಾಗುವ ದುಷ್ಪರಿಣಾಮಗಳ ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು ಶಿಕ್ಷಕ ವೆಂಕಿ ಫಲಿಮಾರ್, ದೈಹಿಕ ಶಿಕ್ಷಕ ಕರುಣಾಕರ್ ಶಿವಪ್ರಸಾದ್ ಬಿ . ಅರ್ಪಣಾ ವಿಎ.ಶಿಲ್ಪ ನಿರೀಕ್ಷಾ .ಮಮತಾ .ದೀಪಕ್ ಕುಮಾರ್ ಉಪಸ್ಥಿತರಿದ್ದರು .

Edited By : PublicNext Desk
Kshetra Samachara

Kshetra Samachara

20/06/2026 07:17 pm

Cinque Terre

102

Cinque Terre

0

ಸಂಬಂಧಿತ ಸುದ್ದಿ