ಚಿಕ್ಕಮಗಳೂರು: ಮಕ್ಕಳ ಲೈಂಗಿಕ ಶೋಷಣೆ ಮತ್ತು ಆಕ್ಷೇಪಣಾರ್ಹ ಚಿತ್ರ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದ ಮೇಲೆ ಚಿಕ್ಕಮಗಳೂರು ನಗರದ ಮಹಿಳೆಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ರಾಷ್ಟ್ರೀಯ ನಾಪತ್ತೆಯಾದ ಮತ್ತು ಶೋಷಣೆಗೆ ಒಳಗಾದ ಮಕ್ಕಳ ಕೇಂದ್ರ (NCMEC) ನೀಡಿದ ವರದಿಯನ್ನಾಧರಿಸಿ ಸೈಬರ್ ಕ್ರೈಂ ಠಾಣೆಯ ಎಎಸ್‌ಐ ಹೇಮಚಂದ್ರೇಗೌಡ ಡಿ. ಅವರು ಎನ್‌ಸಿಆರ್‌ಪಿ ಪೋರ್ಟಲ್ ಪರಿಶೀಲಿಸಿದಾಗ ಈ ಜಾಲ ಪತ್ತೆಯಾಗಿದೆ.
ತಾಂತ್ರಿಕ ಮಾಹಿತಿ ಕಲೆಹಾಕಿದಾಗ ಚಿಕ್ಕಮಗಳೂರು ಟೌನ್ ಬಾರ್‌ಲೈನ್ ರಸ್ತೆಯ ನಿವಾಸಿ ಮುಬೀನಾ ತಾಜ್ ಎಂಬುವವರು ತಮ್ಮ ಇನ್‌ಸ್ಟಾಗ್ರಾಮ್ ಮೆಸೆಂಜರ್ ಮೂಲಕ ಅಪ್ರಾಪ್ತ ವಯಸ್ಸಿನ ಮಕ್ಕಳ 20 ಸೆಕೆಂಡ್‌ಗಳ ನಗ್ನ ಹಾಗೂ ಲೈಂಗಿಕ ಕ್ರಿಯೆಯ ವಿಡಿಯೋವನ್ನು ಶೇರ್ ಮಾಡಿರುವುದು ದೃಢಪಟ್ಟಿದೆ. ಆರೋಪಿ ಮಹಿಳೆಯ ವಿರುದ್ಧ ಸೈಬರ್ ಅಪರಾಧ ಕಾಯ್ದೆಯಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ.
PublicNext
20/06/2026 07:38 pm
LOADING...