ಚಿಕ್ಕಮಗಳೂರು: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಯುವಕನೊಬ್ಬನನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಸಂತೇ ಮೈದಾನದ ಕಟ್ಟೆಯ ಬಳಿ ಖಚಿತ ಮಾಹಿತಿ ಮೇರೆಗೆ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಧನರಾಜ್ ದಿಢೀರ್ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ ಇಂದಿರಾಗಾಂಧಿ ಬಡಾವಣೆಯ ನಿವಾಸಿಯಾದ ಪ್ರಜ್ವಲ್ (24) ಎಂಬ ಯುವಕ ಕಟ್ಟೆಯ ಮೇಲೆ ಕುಳಿತು ಗಾಂಜಾ ಸೇವಿಸುತ್ತಾ ದಟ್ಟವಾಗಿ ಹೊಗೆ ಬಿಡುತ್ತಿರುವುದು ಕಂಡುಬಂದಿದೆ. ತಕ್ಷಣ ಪೊಲೀಸರು ಆತನನ್ನು ಸುತ್ತುವರೆದು ವಶಕ್ಕೆ ಪಡೆದಿದ್ದಾರೆ. ಬಂಧಿತ ಯುವಕ ವೃತ್ತಿಯಲ್ಲಿ ಡ್ರೈವರ್ ಆಗಿದ್ದು, ಆತನ ಬಾಯಿಯಿಂದ ಗಾಂಜಾ ವಾಸನೆ ಬರುತ್ತಿದ್ದ ಕಾರಣ ಪೊಲೀಸರು ತಕ್ಷಣವೇ ವೈದ್ಯಾಧಿಕಾರಿಗಳ ಮುಂದೆ ಹಾಜರುಪಡಿಸಿದ್ದಾರೆ.
ವೈದ್ಯರು ನಡೆಸಿದ ಮೂತ್ರ ಪರೀಕ್ಷೆಯಲ್ಲಿ ಆತ ಗಾಂಜಾ ಸೇವಿಸಿರುವುದು (Marijuana Urine Test For Ganja Consumption Is Positive) ವೈಜ್ಞಾನಿಕವಾಗಿ ದೃಢಪಟ್ಟಿದೆ. ಸಾರ್ವಜನಿಕ ಸ್ಥಳದಲ್ಲಿ ಮಾದಕ ದ್ರವ್ಯ ಸೇವಿಸಿ ಕಾನೂನು ಉಲ್ಲಂಘಿಸಿದ ಆರೋಪಿ ಪ್ರಜ್ವಲ್ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.
PublicNext
20/06/2026 09:08 pm
LOADING...