ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ವಿವಿಧೆಡೆ ಫುಟ್ ಪಾತ್ ತೆರವುಗೊಳಿಸಿದ ಸಂಚಾರಿ ಪೊಲೀಸರು

ಶಿವಮೊಗ್ಗ : ಪ್ರಮುಖ ರಸ್ತೆಗಳಲ್ಲಿ ಅತಿಕ್ರಮಣ ತೆರವುಗೊಳಿಸಿ ಸಾರ್ವಜನಿಕರಿಗೆ ಸುಗಮ ಸಂಚಾರ ಕಲ್ಪಿಸುವ ಉದ್ದೇಶದಿಂದ ಸಂಚಾರಿ ಪೊಲೀಸ್ ಠಾಣೆ ಸಿಪಿಐ ದೇವರಾಜ್ ಕಾರ್ಯಾಚರಣೆ ನಡೆಸಿ ಫುಟ್ ಪಾತ್ ನ್ನು ತೆರವುಗೊಳಿಸಿದರು‌.‌

ನಗರದ ಓಟಿ ರಸ್ತೆ, ಗೌರವ್ ಲಾಡ್ಜ್ ಸಮೀಪದ ಆಟೋ ನಿಲ್ದಾಣ ಹಾಗೂ ಬಿ.ಹೆಚ್. ರಸ್ತೆ ಭಾಗಗಳಲ್ಲಿ ಸಂಚಾರಿ ಪೊಲೀಸ್ ಠಾಣೆಯ ಸಿಪಿಐ ದೇವರಾಜ್ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು. ಹಲವು ದಿನಗಳಿಂದ ಈ ಪ್ರದೇಶಗಳಲ್ಲಿ ಫುಟ್‌ ಪಾತ್‌ಗಳ ಮೇಲೆ ಆಟೋ ನಿಲ್ದಾಣಗಳು, ತಳ್ಳುವ ಗಾಡಿಗಳು ಹಾಗೂ ಸಣ್ಣ ವ್ಯಾಪಾರ ಚಟುವಟಿಕೆಗಳು ಹೆಚ್ಚಾಗಿದ್ರಿಂದ ಪಾದಚಾರಿಗಳು ಮತ್ತು ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದರು. ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಫುಟ್ ಪಾತ್ ತೆರವುಗೊಳಿಸಿದರು. ಫುಟ್‌ ಪಾತ್‌ ಗಳನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವ ಜೊತೆಗೆ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದ ಆಟೋಗಳು ಮತ್ತು ಇತರೆ ವಸ್ತುಗಳನ್ನು ತೆರವುಗೊಳಿಸಲಾಯಿತು.

Edited By : Manjunath H D
PublicNext

PublicNext

20/06/2026 08:03 pm

Cinque Terre

2.26 K

Cinque Terre

0

ಸಂಬಂಧಿತ ಸುದ್ದಿ