ಹರಿದ್ವಾರ: ಭಾರತದ ಯುವ ಪ್ರತಿಭೆಗಳು ಮತ್ತು ವಿಶಿಷ್ಟ ವ್ಯಕ್ತಿತ್ವಗಳು ಜಗತ್ತಿನಾದ್ಯಂತ ಗಮನ ಸೆಳೆಯುತ್ತಲೇ ಇರುತ್ತವೆ. ಇದೀಗ ಹರಿಯಾಣದ 12ನೇ ತರಗತಿ ವಿದ್ಯಾರ್ಥಿ ಕರ್ಣ್ ರಾತಿ (Karn Rathi) ತಮ್ಮ ಅಸಾಧಾರಣ ಎತ್ತರದಿಂದ ದೇಶದ ಗಮನ ಸೆಳೆದಿದ್ದಾರೆ. ಯೋಗ ಗುರು ಬಾಬಾ ರಾಮ್‌ದೇವ್ ಅವರು ಈ ಅಪರೂಪದ ಯುವಕನನ್ನು ಭೇಟಿಯಾಗಿದ್ದಾರೆ.
ಕರ್ಣ್ ರಾತಿ ಬರೋಬ್ಬರಿ 8 ಅಡಿ 2 ಇಂಚು ಎತ್ತರವಿದ್ದಾರೆ. ಇವರು ಭಾರತದ ಮಾತ್ರವಲ್ಲದೆ, ವಿಶ್ವದ ಅತ್ಯಂತ ಎತ್ತರದ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದಾರೆ.
ಖಲಿಗಿಂತಲೂ ಎತ್ತರ: ಭಾರತದ ಪ್ರಸಿದ್ಧ ಡಬ್ಲ್ಯುಡಬ್ಲ್ಯುಇ (WWE) ರೆಸ್ಲರ್ 'ದಿ ಗ್ರೇಟ್ ಕಲಿ' (7 ಅಡಿ 1 ಇಂಚು) ಅವರಿಗಿಂತಲೂ ಕರ್ಣ್ ರಾತಿ ಒಂದು ಅಡಿಗೂ ಹೆಚ್ಚು ಎತ್ತರವಿದ್ದಾರೆ. ಕರ್ಣ್ ಅವರ ತಾಯಿ ಕೂಡ ಅಸಾಧಾರಣ ಎತ್ತರವನ್ನು ಹೊಂದಿದ್ದು, ಅವರು 7 ಅಡಿ ಎತ್ತರವಿದ್ದಾರೆ.
ಈ ಅದ್ಭುತ ಯುವಕನನ್ನು ಭೇಟಿಯಾದ ಬಾಬಾ ರಾಮ್‌ದೇವ್ ಅವರು, ಭಾರತದ ನೆಲದ ಶಕ್ತಿ ಮತ್ತು ವೈವಿಧ್ಯತೆಗೆ ಇದು ಸಾಕ್ಷಿ ಎಂದು ಶ್ಲಾಘಿಸಿದ್ದಾರೆ. ಹರಿಯಾಣದ ಈ ಯುವಕನ ದೈತ್ಯ ಪ್ರತಿಭೆ ಮತ್ತು ಎತ್ತರವನ್ನು ಕಂಡು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ "ವೀರ ಭೂಮಿ ಭಾರತಕ್ಕೆ ವಂದನೆಗಳು" ಎಂದು ಹೆಮ್ಮೆಯಿಂದ ಕಮೆಂಟ್ ಮಾಡುತ್ತಿದ್ದಾರೆ.
-ಮನೋಜ್ ಕೆ.ಬೆಂಗ್ರೆ, ಮಂಗಳೂರು
PublicNext
27/06/2026 01:34 pm
LOADING...