ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬದನೆಕಾಯಿ ಬಜ್ಜಿ

‘ಬದನೆಕಾಯಿ ಬಜ್ಜಿ’ ಮಾಡಿದರೆ ಪ್ಲೇಟ್ ಖಾಲಿ

ಬೇಕಾಗುವ ಪದಾರ್ಥಗಳು:

ಬದನೆಕಾಯಿ

ಕಡಲೆ ಹಿಟ್ಟು

ಅರಿಶಿನ ಪುಡಿ:

ಜೀರಿಗೆ ಪುಡಿ

ಧನಿಯಾ ಪುಡಿ

ಇಂಗು

ಕರಿಬೇವು

ಉಪ್ಪು

ಎಣ್ಣೆ

ಮಾಡುವ ವಿಧಾನ:

ಮೊದಲು ಬದನೆಕಾಯಿಯನ್ನು ಚೆನ್ನಾಗಿ ತೊಳೆದು, ತೆಳುವಾದ ಮತ್ತು ವೃತ್ತಾಕಾರದಲ್ಲಿ ಕತ್ತರಿಸಿ. ಒಂದು ಪಾತ್ರೆಯಲ್ಲಿ ಕಡಲೆ ಹಿಟ್ಟು, ಹೆಚ್ಚಿದ ಕರಿಬೇವು, ಅರಿಶಿನ ಪುಡಿ, ಜೀರಿಗೆ ಪುಡಿ, ಧನಿಯಾ ಪುಡಿ, ಇಂಗು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ. ನಂತರ ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ, ಗಂಟಿಲ್ಲದಂತೆ ಮಧ್ಯಮ ಹದಕ್ಕೆ (ಬಜ್ಜಿ ಹಿಟ್ಟಿನ ಹದಕ್ಕೆ) ಕಲಸಿಕೊಳ್ಳಿ.

ಬಾಣಲೆಯಲ್ಲಿ ಎಣ್ಣೆ ಹಾಕಿ ಕಾದ ನಂತರ, ಕತ್ತರಿಸಿಟ್ಟ ಬದನೆಕಾಯಿ ಬಿಲ್ಲೆಗಳನ್ನು ಸಿದ್ಧಪಡಿಸಿದ ಕಡಲೆ ಹಿಟ್ಟಿನ ಮಿಶ್ರಣದಲ್ಲಿ ಮುಳುಗಿಸಿ,

ಹಿಟ್ಟಿನಲ್ಲಿ ಅದ್ದಿದ ಬದನೆಕಾಯಿಗಳನ್ನು ಎಣ್ಣೆಯಲ್ಲಿ ಹಾಕಿ, ಅವು ಹೊಂಬಣ್ಣಕ್ಕೆ ತಿರುಗಿ ಗರಿಗರಿಯಾಗುವರೆಗೆ ಚೆನ್ನಾಗಿ ಕರಿಯಿರಿ. ನಂತರ ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹಾಕಿ. ಈಗ ಬಿಸಿಬಿಸಿಯಾದ ಮತ್ತು ಕ್ರಿಸ್ಪಿಯಾದ ಬದನೆಕಾಯಿ ಬಜ್ಜಿ ಸಿದ್ಧ.

Edited By : Nirmala Aralikatti
PublicNext

PublicNext

13/07/2026 10:35 am

Cinque Terre

5.3 K

Cinque Terre

0