ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಮರಾಜನಗರ ಜಿಲ್ಲೆಯಲ್ಲಿ ಎಸ್.ಐ.ಆರ್ ಕಾರ್ಯ ನಿರ್ವಹಣೆ : 6,54,515 ಗಣತಿ ನಮೂನೆ ಡಿಜಿಟಲೀಕರಣ

ಚಾಮರಾಜನಗರ : ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ಪ್ರಕ್ರಿಯೆಯು ಪ್ರಗತಿಯಲ್ಲಿದ್ದು, ಈವರೆಗೆ 6,54,515 ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿದೆ. 

ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,24,616 ಮತದಾರರಿದ್ದು, ಈ ಪೈಕಿ 1,66,208 ಗಣತಿ ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. 

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,21,151 ಮತದಾರರಿದ್ದು, ಇದರಲ್ಲಿ 1,66,000 ಗಣತಿ  ನಮೂನೆಗಳು ಡಿಜಿಟಲೀಕರಣಗೊಂಡಿದೆ. 

ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,17,852 ಮತದಾರರಿದ್ದು, ಈ ಪೈಕಿ 1,61,259 ಗಣತಿ ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ.  ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,16,605 ಮತದಾರರಿದ್ದು, ಇದರಲ್ಲಿ 1,61,048 ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿದೆ.  ಜಿಲ್ಲೆಯಲ್ಲಿ 983 ಮತಗಟ್ಟೆಗಳಿದ್ದು, ಒಟ್ಟಾರೆ 8,80,224 ಮತದಾರರಿದ್ದಾರೆ. ಇದರಲ್ಲಿ 6,54,515 ಗಣತಿ ನಮೂನೆಗಳನ್ನು ಈಗಾ ಗಲೇ ಡಿಜಿಟಲೀಕರಣಗೊಳಿಸಲಾಗಿದೆ. 

ಗೈರು ಹಾಜರಿ, ಸ್ಥಳಾಂತರ, ಮರಣ ಹೊಂದಿರುವ ಹಾಗೂ ಎರಡು ಕಡೆ ನೋಂದಣಿಯಾಗಿರುವ ಹಾಗೂ ಇತರೆ ಸೇರಿದಂತೆ ಒಟ್ಟು 41,743 ಮತದಾರರನ್ನು ಗುರುತಿಸಲಾಗಿದೆ. ಇವರಲ್ಲಿ 834 ಗೈರು ಹಾಜರಿ, 15,283 ಸ್ಥಳಾಂತರ, 22,366 ಮರಣ ಹೊಂದಿದವರು, 3,188 ಎರಡು ಕಡೆ ನೊಂದಣಿಯಾಗಿರುವವರು, ಇತರೆ 72 ಸೇರಿದ್ದಾರೆ.

 

Edited By : PublicNext Desk
Kshetra Samachara

Kshetra Samachara

20/07/2026 06:34 pm

Cinque Terre

360

Cinque Terre

0