ಚಾಮರಾಜನಗರ : ಕಾವೇರಿ ಜಲಾನಯನ ಪ್ರದೇಶದಲ್ಲಿ ಸತತ ಮಳೆಯಿಂದಾಗಿ ಕಾವೇರಿ ನದಿ ಭೋರ್ಗರೆದು ಹರಿಯುತ್ತಿದೆ. ಕೇರಳದ ವಯನಾಡ್ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಕಬಿನಿ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಈಗಾಗಲೇ ಅಪಾರ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ಇದರಿಂದ ಕಾವೇರಿ ನದಿ ಭೋರ್ಗರೆಯುತ್ತಿದೆ.
ಕಾವೇರಿ ನದಿ ರೌದ್ರನರ್ತನ ಮಾಡುತ್ತಾ ದುಮ್ಮಿಕ್ಕಿ ತಮಿಳುನಾಡಿನತ್ತ ಹರಿಯುತ್ತಿದ್ದಾಳೆ. ಕಬಿನಿ ಜಲಾಶಯದಿಂದ ಹೊರಬಂದ ನೀರು ಮೈಸೂರಿನ ಟಿ. ನರಸೀಪುರ ಬಳಿ ಕಾವೇರಿಯಾಗಿ ಹರಿಯುತ್ತಾ, ಕೊಳ್ಳೇಗಾಲದ ಭರಚುಕ್ಕಿಯಲ್ಲಿ ಭೋರ್ಗರೆಯುತ್ತಾ, ಹನೂರು ತಾಲೂಕಿನ ಹೊಗೆನಕಲ್ ಜಲಪಾತದಲ್ಲಿ ನರ್ತಿಸುತ್ತಾ ತಮಿಳುನಾಡು ಸೇರುತ್ತಿದ್ದಾಳೆ. ಎರಡು ಜಲಪಾತಗಳ ಮಾರ್ಗವಾಗಿ ಕಾವೇರಿ ತಮಿಳುನಾಡು ಸೇರುತ್ತಿದ್ದು, ಕಾವೇರಿಯ ರಭಸಕ್ಕೆ ಹೊಗೆನಕಲ್ ಜಲಪಾತದಲ್ಲಿ ಕಾವೇರಿಯ ರೌದ್ರನರ್ತನ ನೋಡುಗರ ಕಣ್ಮನ ಸೆಳೆಯುತ್ತಿದೆ.
PublicNext
05/08/2026 08:22 pm
LOADING...