ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಹೆಚ್‌ಪಿವಿ ಲಸಿಕೆ ಕಡ್ಡಾಯವಲ್ಲ - ಸಚಿವ ಯು. ಟಿ. ಖಾದರ್

ಮಂಗಳೂರು: ಹೆಣ್ಣುಮಕ್ಕಳಿಗೆ ಗರ್ಭಕಂಠದ ಕ್ಯಾನ್ಸರ್ ತಡೆಯಲು ನೀಡಲಾಗುವ ಹೆಚ್‌ಪಿವಿ (HPV) ಲಸಿಕೆ ಶಾಲೆಗಳಲ್ಲಿ ಕಡ್ಡಾಯವಲ್ಲ. ಲಸಿಕೆ ಕೊಡಿಸುವುದು ಬಿಡುವುದು ಹೆತ್ತವರಿಗೆ ಬಿಟ್ಟದ್ದು ಎಂದು ಆರೋಗ್ಯ ಸಚಿವ ಯು. ಟಿ. ಖಾದರ್ ತಿಳಿಸಿದ್ದಾರೆ.

"ಹೆಣ್ಣುಮಕ್ಕಳಲ್ಲಿ ಕಂಡುಬರುವ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಹೆಚ್‌ಪಿವಿ ಲಸಿಕೆ ನೀಡಲಾಗುತ್ತದೆ. ಆರೋಗ್ಯ ಇಲಾಖೆಯ ಸಿಬ್ಬಂದಿ ಶಾಲೆಗಳಿಗೆ ತೆರಳಿ ಹೆಚ್‌ಪಿವಿ ಲಸಿಕೆ ಹಾಗೂ ಕ್ಯಾನ್ಸರ್ ತಡೆ ಕುರಿತು ಜಾಗೃತಿ ಮತ್ತು ಕೌನ್ಸಿಲಿಂಗ್ ನಡೆಸಲಿದ್ದಾರೆ. ಆದರೆ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಬೇಕೋ ಬೇಡವೋ ಎಂಬುದನ್ನು ಪೋಷಕರೇ ತೀರ್ಮಾನಿಸಬೇಕು. ಸರ್ಕಾರದ ಕಡೆಯಿಂದ ಲಸಿಕೆ ಪಡೆಯುವುದು ಕಡ್ಡಾಯವಲ್ಲ, ಪೋಷಕರು ಒಪ್ಪಿಗೆ ನೀಡಿದರೆ ಮಾತ್ರ ಲಸಿಕೆ ಹಾಕಲಾಗುತ್ತದೆ" ಎಂದು ಖಾದರ್ ಸ್ಪಷ್ಟಪಡಿಸಿದರು.

Edited By :
PublicNext

PublicNext

22/07/2026 06:47 pm

Cinque Terre

117.17 K

Cinque Terre

2

ಸಂಬಂಧಿತ ಸುದ್ದಿ