ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿ ಕಾರಾಗೃಹದಿಂದ ಪರಾರಿ | ಬೀದರ್‌ನಲ್ಲಿ ಮತ್ತೊಬ್ಬ ಕೈದಿ ಬಂಧನ

ಕಲಬುರಗಿ ಕೇಂದ್ರ ಕಾರಾಗೃಹದಿಂದ ಜುಲೈ 14ರಂದು ಪರಾರಿಯಾಗಿದ್ದ ಮೂವರು ಕೈದಿಗಳ ಪೈಕಿ ಇನ್ನೊಬ್ಬ ಆರೋಪಿಯನ್ನು ಬೀದರ್ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಬೀದರ್ ತಾಲೂಕಿನ ಬಕ್ಕಚೌಡಿ ಗ್ರಾಮದ ಸಾಗರ ಭೀಮರಾಯನನ್ನು ಭಾಲ್ಕಿ ಪಟ್ಟಣದಲ್ಲಿ ಶನಿವಾರ ವಶಕ್ಕೆ ಪಡೆಯಲಾಗಿದೆ.

ಜುಲೈ 14ರಂದು ಬೆಳಿಗ್ಗೆ ಕಲಬುರಗಿ ಕೇಂದ್ರ ಕಾರಾಗೃಹದ ಕಾಂಪೌಂಡ್ ಹಾರಿ ಸಾಗರ, ಸಂತೋಷ್ ಮೇತ್ರೆ ಮತ್ತು ಮಸ್ತಾನ್ ಅಲಿಯಾಸ್ ಮಾಶಾ ಎಂಬ ಮೂವರು ಕೈದಿಗಳು ಪರಾರಿಯಾಗಿದ್ದರು. ವಿವಿಧ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂವರನ್ನು ಕಲಬುರಗಿ ಕಾರಾಗೃಹದಲ್ಲಿ ಇರಿಸಲಾಗಿತ್ತು.

ಪೊಲೀಸರು ಈಗಾಗಲೇ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಸಂತಪುರ ಗ್ರಾಮದ ಸಂತೋಷ್ ಮೇತ್ರೆಯನ್ನು ಮಂಗಳವಾರ ರಾತ್ರಿ ಹುಮನಾಬಾದ್‌ನಲ್ಲಿ ಬಂಧಿಸಿದ್ದರು. ಈಗ ಸಾಗರನನ್ನು ಬಂಧಿಸಲಾಗಿದ್ದು, ಬಸವಕಲ್ಯಾಣ ತಾಲೂಕಿನ ಇಸ್ಲಾಂಪುರದ ಮಸ್ತಾನ್ ಅಲಿಯಾಸ್ ಮಾಶಾ ಪರವಾಗಿ ಶೋಧ ಮುಂದುವರೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Edited By : Nagaraj Tulugeri
PublicNext

PublicNext

22/07/2026 10:41 pm

Cinque Terre

8.9 K

Cinque Terre

0

ಸಂಬಂಧಿತ ಸುದ್ದಿ