ಕಲಬುರಗಿ:ಎರಡು ಬಸ್ ಗಳ ಸೇರಿ ಕಾರ್ ನಡುವೆ ಸರಣಿ ಅಪಘಾತ ಸಂಭವಿಸಿದ್ದು ಕೆ ಎಸ್ ಆರ್ ಟಿ ಸಿ ಬಸ್ ಚಾಲಕ ಸ್ಥಳದಲ್ಲೆ ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಡೊಂಗರಗಾಂವ್ ಕ್ರಾಸ್ ಹತ್ತಿರ ನಡೆದಿದೆ.ತುಕಾರಾಮ್ (46) KSRTC ಬಸ್ ಚಾಲಕ ಸಾವನಪ್ಪಿದ್ದು ಎಂದು ತಿಳಿದು ಬಂದಿದೆ.ಎರಡು ಬಸ್ ಕಾರ್ ನಲ್ಲಿದ್ದವರು ಸೇರಿ ಹತ್ತಕ್ಕು ಹೆಚ್ಚು ಜನರಿಗೆ ಗಾಯವಾಗಿದೆ. ಕಲಬುರಗಿಯಿಂದ ಬೀದರ್ ಗೆ ಹೊರಟಿದ್ದ ಬಸ್, ಬೀದರ್ ಕಡೆಯಿಂದ ಕಲಬುರಗಿ ಕಡೆಗೆ ಬರ್ತಿದ್ದ ಬಸ್ ನಡುವೆ ಮುಖಾ ಡಿಕ್ಕಿಯಾಗಿದೆ.ಬಸ್ ಡಿಕ್ಕಿಯ ಬಳಿಕ ಕಾರ್ ಡಿಕ್ಕಿ ಹೊಡೆದಿದೆ. ಬೀದರ್ ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ಕೆಲ ಕಾಲ ರಸ್ತೆ ಸಮಸ್ಯೆ ಉಂಟಾಗಿದ್ದು. ಈ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
02/08/2026 08:20 am
LOADING...