ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹೃದಯಭಾಗದಲ್ಲಿರುವ ಎಪಿಎಂಸಿ (APMC) ಮಾರುಕಟ್ಟೆಗೆ ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಬಿ. ವೀರಪ್ಪ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹೊಸಪೇಟೆ ಎಪಿಎಂಸಿಗೆ ಭೇಟಿ ನೀಡಿದ ವೇಳೆ ರೈತರ ಬಳಿ ತೂಕದಲ್ಲಿ ಮೋಸ ಮಾಡುವುದು ಹಾಗೂ ಕಮಿಷನ್ ನೆಪದಲ್ಲಿ ಶೋಷಣೆ ಮಾಡುವುದು ಕಂಡುಬಂದರೆ ಯಾವುದೇ ಮುಲಾಜಿಲ್ಲದೇ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಉಪಲೋಕಾಯುಕ್ತ ಜಸ್ಟಿಸ್ ವೀರಪ್ಪ ಅವರು ವರ್ತಕರಿಗೆ ಹಾಗೂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಇದೇ ವೇಳೆ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಎಲ್ಲೆಂದರಲ್ಲಿ ಕಸ ಬಿದ್ದು ಅಸ್ವಚ್ಛತೆ ತಾಂಡವವಾಡುತ್ತಿದ್ದುದನ್ನು ಕಂಡು ಅಧಿಕಾರಿಗಳ ವಿರುದ್ಧ ತೀವ್ರವಾಗಿ ಗರಂ ಆದರು. "ಯಾಕ್ರಿ, ಆವರಣದಲ್ಲಿ ಕೊಂಚವೂ ಸ್ವಚ್ಛತೆ ಇಲ್ಲ? ತಕ್ಷಣ ಕ್ಲೀನ್ ಮಾಡಿಸಬೇಕು ಅಲ್ವಾ?" ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು ಗಂಭೀರವಾಗಿ ವಾರ್ನಿಂಗ್ ನೀಡಿದರು.
PublicNext
25/07/2026 11:37 am
LOADING...