ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಪೇಟೆ: ಬರ ಅಧ್ಯಯನ ನಡೆಸಿದ ಬಿಜೆಪಿ ತಂಡ; ಅಧಿಕಾರಿಗಳ ಬೇಕಾಬಿಟ್ಟಿ ಉತ್ತರಕ್ಕೆ ಆರ್. ಅಶೋಕ್ ಗರಂ

ಹೊಸಪೇಟೆ : ಇಂದು ವಿಜಯನಗರ ಜಿಲ್ಲೆಗೆ ಬಿಜೆಪಿ ಬರ ಅಧ್ಯಯನ ತಂಡ ಆಗಮಿಸಿತ್ತು. ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದ ತಂಡದಿಂದ ಬರ ಪರಿಶೀಲನೆ ನಡೆಯಿತು. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಭುವನಹಳ್ಳಿ ಗ್ರಾಮದ ಹೊರವಲಯದ ರೈತ ಮಹಿಳೆಯ ಜಮೀನಿಗೆ ಭೇಟಿ ನೀಡಿ ಸೂರ್ಯಕಾಂತಿ, ತೊಗರಿ ಬೆಳೆ ಪರಿಶೀಲನೆ ಮಾಡಿದ್ರು. ಜೊತೆಗೆ ನೆಲ‌ ಬಿಟ್ಟು ಮೇಲೇಳದ ಬೆಳೆ ವೀಕ್ಷಿಸಿ ರೈತ ಮಹಿಳೆಗೆ ಧೈರ್ಯ ತುಂಬಿದ್ರು.

ನಿಮ್ಮ ಪರವಾಗಿ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ ಅಂತ ಆರ್.‌ಅಶೋಕ್ ಭರವಸೆ ನೀಡಿದ್ರು.

ಬರಗಾಲ ಪರಿಸ್ಥಿತಿ ಬಗ್ಗೆ ಅಧಿಕಾರಿಗಳಿಂದ ವಿಪಕ್ಷ ನಾಯಕ ಆರ್.‌ಅಶೋಕ್ ಮಾಹಿತಿ ಪಡೆದ್ರು. ಅಧಿಕಾರಿಗಳು ಲಂಚ ಕೇಳುವ ಬಗ್ಗೆ ಆರ್.ಅಶೋಕ್ ಗೆ ರೈತರು ದೂರು ನೀಡಿದ್ರು. ಮೋಟಾರ್, ಪಂಪ್‌ಸೆಟ್ ಅಳವಡಿಸೋಕೆ ಲಂಚ ನೀಡಬೇಕು ಅಂತ ಅಧಿಕಾರಿಗಳ ವಿರುದ್ಧ ರೈತರು ಅಳಲು ತೋಡಿಕೊಂಡ್ರು. ಈ ದೂರಿನ ಬಗ್ಗೆ ಲಿಖಿತವಾಗಿ ಬರೆದುಕೊಡಿ ಅಂತಾ ವಿಪಕ್ಷ ನಾಯಕ್‌ ಆರ್.‌ಅಶೋಕ್ ರೈತನಿಗೆ ತಿಳಿಸಿದ್ರು. ಬರ ಅಧ್ಯಯನ ವೇಳೆ ಆರ್. ಅಶೋಕ್ ಗೆ ಶಾಸಕ ಕೃಷ್ಣಾ ನಾಯಕ್, ಬಂಗಾರು ಹನುಮಂತು ಸೇರಿ ಬಿಜೆಪಿ ಮುಖಂಡರು ಸಾಥ್ ನೀಡಿದ್ರು.

Edited By :
PublicNext

PublicNext

30/07/2026 08:22 pm

Cinque Terre

10.68 K

Cinque Terre

0

ಸಂಬಂಧಿತ ಸುದ್ದಿ