ಹಗರಿಬೊಮ್ಮನಹಳ್ಳಿ : ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಕಸ್ಟೋಡಿಯಲ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಖಲೀಲ್ ನ ಹೊಡೆದು ಸಾಯಿಸಿರೋ ಆರೋಪದಡಿ ಇಬ್ಬರು ಪೊಲೀಸ್ ಸಿಬ್ಬಂದಿ ವಶಕ್ಕೆ ಪಡೆಯಲಾಗಿದೆ. ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಇಟ್ಟಗಿ ರಾಘವೇಂದ್ರ, ಪಿಸಿ ವೆಂಕಟೇಶ್ ವಶಕ್ಕೆ ಪಡೆದ ಪೊಲೀಸ್ ಸಿಬ್ಬಂದಿ ಆಗಿದ್ದಾರೆ.
ಪತಿ - ಪತ್ನಿ ಜಗಳವಾಡಿಕೊಂಡು ಬಂದಿದ್ದಕ್ಕೆ ಕೊಲೆ ಮಾಡಿದ್ದಾರೆ ಅಂತ ಮೃತ ಖಲೀಲ್ ಪತ್ನಿ ಶೈನಾಜ್ ದೂರು ನೀಡಿದ್ದಳು. ಪತ್ನಿ ಶೈನಾಜ್ ದೂರಿನ ಆಧಾರದ ಮೇಲೆ ವಿಜಯನಗರ ಎಸ್ಪಿ ಜಾಹ್ನವಿ FIR ದಾಖಲಿಸಿದ್ದರು. ನಿನ್ನೆ ದಿನ ಸ್ಥಳದಲ್ಲೇ ಮೊಕ್ಕಾಂ ಹೂಡಿ ಸಿಬ್ಬಂದಿ ಮೇಲೆ FIR ದಾಖಲಿಸಿದ್ದರು.
ಬಳ್ಳಾರಿ ವಲಯದ ಐಜಿಪಿ ಡಾ. ಹರ್ಷ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಸದ್ಯ ವಶಕ್ಕೆ ಪಡೆದಿರೋ ಪೊಲೀಸರು ತನಿಖಾಧಿಕಾರಿ ಹಾಗೂ ಕೂಡ್ಲಿಗಿ DYSP ಮಲ್ಲೇಶಪ್ಪ ದೊಡ್ಡಮನಿ ಸಿಬ್ಬಂದಿಯನ್ನ ವಿಚಾರಣೆ ನಡೆಸ್ತಿದ್ದಾರೆ. ಎಸ್ಪಿ ಜಾಹ್ನವಿ, ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ ಹಗರಿಬೊಮ್ಮನಹಳ್ಳಿಯಲ್ಲೇ ಮೊಕ್ಕಾಂ ಹೂಡಿದ್ದಾರೆ.
PublicNext
03/08/2026 05:52 pm
LOADING...