ಹಗರಿಬೊಮ್ಮನಹಳ್ಳಿ : ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಗಿಮಾವಿನಹಳ್ಳಿ ಗ್ರಾಮದ ಚಿಕ್ಕಕೆರೆ ಬಳಿ ಅಕ್ರಮವಾಗಿ ಕಾಡು ಹಂದಿಯನ್ನು ಬೇಟೆಯಾಡಿದವರನ್ನು ಬಂಧಿಸಲಾಗಿದೆ.
ಮಾಂಸದ ಸ್ವಂತ ಬಳಕೆ ಹಾಗೂ ಮಾರಾಟದ ಉದ್ದೇಶದಿಂದ ಅದನ್ನು ತುಂಡುಗಳಾಗಿ ಕತ್ತರಿಸುತ್ತಿದ್ದ ಹನುಮನಹಳ್ಳಿಯ ಪರಶುರಾಮ, ಮಾಗಿಮಾವಿನಹಳ್ಳಿಯ ಕೆ. ಪಾಂಡುರಂಗ, ಇದೇ ಗ್ರಾಮದವರಾದ ಸೋಮಪ್ಪ ತಲೆಮಾರದ್, ಪ್ರಭಾಕರ್ ತಲೆಮಾರದ್ ಎಂಬುವವರನ್ನು ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.
ಈ ಕೃತ್ಯಕ್ಕಾಗಿ ನಾಲ್ವರೂ ಆರೋಪಿಗಳ ವಿರುದ್ಧ 'ವನ್ಯಜೀವಿ ಸಂರಕ್ಷಣಾ ಕಾಯ್ದೆ 1972' ರಡಿಯಲ್ಲಿ ವನ್ಯಜೀವಿ ಅಪರಾಧ ವರದಿಯನ್ನು (WCR) ದಾಖಲಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Kshetra Samachara
05/08/2026 02:29 pm
LOADING...