ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಠಾಣಾ ಆವರಣದಲ್ಲಿ ವ್ಯಕ್ತಿ ಸಾವು, ಲಾಕ್ ಅಪ್ ಡೆತ್ತೋ..? ಅಥವಾ ಅಸಹಜ ಸಾವೋ..? ತನಿಖೆ ಬಳಿಕೆ ಸತ್ಯಾಸತ್ಯತೆ ಬೆಳಕಿಗೆ

ಹಗರಿಬೊಮ್ಮನಹಳ್ಳಿ : ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತಡರಾತ್ರಿ ಪತಿ - ಪತ್ನಿ ಇಬ್ಬರೂ ಜಗಳ ಮಾಡುತ್ತಿದ್ದ ವೇಳೆ ಪತಿ ಖಲೀಲ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ಹಗರಿಬೊಮ್ಮನಹಳ್ಳಿ ಠಾಣೆಗೆ ಕರೆತಂದಿದ್ದಾರೆ. ಈ ವೇಳೆ ಮಧ್ಯರಾತ್ರಿ ಇದ್ದಕ್ಕಿದ್ದಂತೆ ಪೊಲೀಸ್ ಠಾಣೆಯಲ್ಲಿಯೇ ತೀವ್ರ ರಕ್ತಸ್ರಾವದಿಂದ ಹರಪನಹಳ್ಳಿ ಮೂಲದ ಖಲೀಲ್(38) ಸಾವನ್ನಪ್ಪಿದ್ದಾನೆ.

ರಾತ್ರಿ ವೇಳೆ ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದ. ನಿನ್ನೆ ರಾತ್ರಿ ವಿಚಾರಣೆಗೆ ಠಾಣೆಗೆ ಕರೆತಂದಿದ್ದಾಗ ಪೊಲೀಸರ ಪ್ರಕಾರ ಫಿಟ್ಸ್ ಬಂದು ಸಾವನ್ನಪ್ಪಿದ್ದಾರೆ ಎನ್ನಲಾಗ್ತಿದೆ.

ಕಟ್ಟಡ ಕಾರ್ಮಿಕನಾಗಿ ಮೃತ ಖಲೀಲ್ ಕೆಲಸ ಮಾಡ್ತಿದ್ದ ಎನ್ನಲಾಗಿದೆ.

ಆದ್ರೆ, ನನ್ನ ಪತಿಯನ್ನು ಪೊಲೀಸರೇ ಏನೋ ಮಾಡಿದ್ದಾರೆ ಅಂತ ಪತ್ನಿ ಶೈನಜ್ ಆರೋಪಿಸಿದ್ದಾಳೆ. ಬಳಿಕ ಶವಾಗಾರಕ್ಕೆ ಹಗರಿಬೊಮ್ಮನಹಳ್ಳಿ ಶಾಸಕ ನೇಮಿರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಸಕರ ಆರೋಪದ ಪ್ರಕಾರ 40 ರಿಂದ 50 ಲಕ್ಷ ಕೊಡ್ತೀವಿ ಕೇಸ್ ಮಾಡಬೇಡಿ. ಕಾಂಪ್ರಮೈಸ್ ಮಾಡಿಕೊಳ್ಳಿ ಅಂತ ಕುಟುಂಬಸ್ಥರಿಗೆ ಹೇಳ್ತಿದ್ದಾರೆ. ಇಷ್ಟು ಹಣ ಕೊಡ್ತೀರಿ, ಆದ್ರೆ ಹೋದ ಜೀವ ವಾಪಸ್ ತರೋಕೆ ಆಗುತ್ತಾ ಅಂತ ಪ್ರಶ್ನಿಸಿದ್ದಾರೆ.

ಇನ್ನು ಹರಪನಹಳ್ಳಿ ಮೂಲದವರಾಗಿರೋ ಮೃತ ಖಲೀಲ್ ನನ್ನ ನೋಡೋದಕ್ಕೆ ಹಗರಿಬೊಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆ, ಪೊಲೀಸ್ ಠಾಣೆ ಬಳಿ ನೂರಾರು ಸಂಖ್ಯೆಯಲ್ಲಿ ಜನ ಸೇರಿದ್ರು. ಬಳ್ಳಾರಿ ವಲಯ ಐಜಿಪಿ ಡಾ.ಹರ್ಷ ಹಗರಿಬೊಮ್ಮನಹಳ್ಳಿ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ.

Edited By : Vinayak Patil
PublicNext

PublicNext

02/08/2026 05:28 pm

Cinque Terre

11.63 K

Cinque Terre

0

ಸಂಬಂಧಿತ ಸುದ್ದಿ