ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ: ಕೌಟುಂಬಿಕ ಕಲಹಕ್ಕೆ ಮೂರು ಜೀವ ಬಲಿ; ಮಕ್ಕಳೊಂದಿಗೆ ಕೃಷಿಹೊಂಡಕ್ಕೆ ಹಾರಿದ ತಾಯಿ

ಕೋಲಾರ: ಹಣಕಾಸಿನ ತೊಂದರೆ ಮತ್ತು ಕೌಟುಂಬಿಕ ಕಲಹಕ್ಕೆ ಮೂರು ಜೀವಗಳು ಬಲಿಯಾಗಿರುವ ಅತ್ಯಂತ ಮನಕಲಕುವ ಘಟನೆ ಕೋಲಾರ ತಾಲೂಕಿನ ಛತ್ರಕೋಡಿಹಳ್ಳಿ ಬಳಿ ಸಂಭವಿಸಿದೆ. ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ಕೃಷಿಹೊಂಡಕ್ಕೆ ಜಿಗಿದು ದುರಂತ ಅಂತ್ಯ ಕಂಡಿದ್ದಾಳೆ.

ಬೆಗ್ಲಿಬೆಣಜೇನಹಳ್ಳಿ ಗ್ರಾಮದ ಸುರೇಶ್ ಎಂಬುವರ ಪತ್ನಿ ಪ್ರಮೀಳಾ (36), ಮಗಳು ಸ್ವಪ್ನ (22) ಹಾಗೂ ಮಗ ಚರಣ್ (18) ಮೃತಪಟ್ಟ ದುರದೃಷ್ಟಕರ ಜೀವಿಗಳು. ಮನೆಮಂದಿಗೆ ಆಸರೆಯಾಗಿ ನಿಲ್ಲಬೇಕಿದ್ದ ಹದಿಹರೆಯದ ಮಕ್ಕಳು ಕಣ್ಣೆದುರೇ ಶವವಾಗಿ ತೇಲಿದ್ದನ್ನು ಕಂಡು ಇಡೀ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದೆ.

ಮನೆಯಲ್ಲಿ ಕಳೆದ ಕೆಲವು ದಿನಗಳಿಂದ ಫೈನಾನ್ಸ್ ಹಾಗೂ ಸಾಲದ ವಿಚಾರವಾಗಿ ತೀವ್ರ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಸಾಲದ ಬಾಧೆ ತಾಳಲಾರದೆ ಹಾಗೂ ಕುಟುಂಬದ ಕಲಹದಿಂದ ಮನನೊಂದ ಪ್ರಮೀಳಾ, ಮಕ್ಕಳೊಂದಿಗೆ ಮನೆಯಿಂದ ಹೊರಬಂದು ಈ ಕಠಿಣ ನಿರ್ಧಾರ ತಳೆದಿದ್ದಾರೆ ಎನ್ನಲಾಗಿದೆ.

ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಕೋಲಾರ ಗ್ರಾಮಾಂತರ ಠಾಣೆಯ ಪೊಲೀಸರು ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದು, ಘಟನೆಯ ನಿಜವಾದ ಕಾರಣ ತಿಳಿಯಲು ತನಿಖೆ ಮುಂದುವರಿಸಿದ್ದಾರೆ.

Edited By :
Kshetra Samachara

Kshetra Samachara

25/07/2026 06:54 pm

Cinque Terre

1.9 K

Cinque Terre

0

ಸಂಬಂಧಿತ ಸುದ್ದಿ