ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಸಿ: ಪ್ರಯೋಜನೆ ಪಡೆದು ಸ್ವಾವಲಂಬಿ ಜೀವನ ನಡೆಸಬೇಕು - ಸುಮಾ ಹಾಸ್ಯಗಾರ

ಶಿರಸಿ: ಮಹಿಳೆಯರು ಅಲಂಕಾರಿಕ ಗೀಡಗಳನ್ನು ತಮ್ಮ ಮನೆಯ ಅಂಗಳದಲ್ಲಿ ಅಥವಾ ತಮ್ಮಲ್ಲಿರುವ ತೋಟಗಳಲ್ಲಿ ಮತ್ತು ಮನೆಯ ಮಹಡಿಯಲ್ಲಿ ಸಾಕಿ ಸಲುಹಿ ಇಂತ ಒಂದು ಡೇರೆ ಹೋವಿನ ಮೇಳಗಳನ್ನು ಮಾಡುವುದರ ಮೂಲಕ ಸಾರ್ವಜನಿಕರಿಗೆ ಹೂವ್ವಿನ ಮಹತ್ತವದ ಬಗ್ಗೆ ಹಾಗೂ ಮಹಿಳೆಯರು ಮನೆಯಿಂದಲೇ ಯಾವ ರೀತಿ ಆರ್ಥಿಕವಾಗಿ ಸ್ವಾವಲಂಬಿಗಳಾಗಬೆಕೆಂಬುದನ್ನು ಪರಿಚಯಿಸುತ್ತಿರುವುದು ಅತ್ಯಂತ ಶ್ಲಾö್ಯಘನೀಯವಾಗಿದ್ದು ಇದರಿಂದ ಸಾರ್ವಜನಿಕರು ಮತ್ತು ಮಹಿಳೆಯರು ಪ್ರೇರಣೆಗೊಂಡು ಅವರು ಕೂಡ ಸಸಿಗಳನ್ನು ಬೆಳೆಸಲು ಮುಂದಾಗುವಂತೆ ಪ್ರೋತ್ಸಾಹಿಸುವುದು ಸಾಮಾನ್ಯವಾದ ಕೆಲಸವಲ್ಲ ಎಂದು ಬೆಂಗಳೂರಿನ ಶ್ರೀಮತಿ ಸುಮಾ ನಾಗರಾಜ ಹಾಸ್ಯಗಾರ ಹೇಳಿದರು.

ಅವರು ಟಿಆರ್‌ಸಿ ಶಿರಸಿ ಹಾಗೂ ತೋಟಗಾರ್ಸ ಗ್ರೀನ್ ಗ್ರೂಪ್ ಫಾರ್ಮರ್ಸ ಫ್ರೊಡ್ಯೂಸರ್ ಕಂಪನಿ,ತೋಟಗಾರಕೆ ಇಲಾಖೆ,ಕೃಷಿ ಇಲಾಖೆ ಶಿರಸಿ ಹಾಗೂ ಆತ್ಮಾ ಸಮಿತಿ ಹಾಗೂ ಡೇರೆಮೇಳ ಸಂಘಟಕರ ಸಹಯೋಗದಲ್ಲಿ ನಗರದ ಎಪಿಎಮ್‌ಸಿ ಆವರಣದಲ್ಲಿರುವ ನೂತನ ಟಿಆರ್‌ಸಿ ಭವನದಲ್ಲಿ ಡೇರೆ ಮೇಳ ಮತ್ತು ಮಾರಾಟ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿರು.

ಅಲ್ಲದೇ ಸಂಘಟಕರಾದ ವೇದಾ ಹೆಗಡೆ ನಿರ್ನಳ್ಳಿ ಮತ್ತು ಅಂಜನಾ ಭಟ್ ಇವರ ನೆತೃತ್ವದಲ್ಲಿ ನಿರಂತರವಾಗಿ ೧೪ ವರ್ಷಗಳಿಂದ ಇಂತ ಅಲಂಕಾರಿಕ ಡೇರೆ ಮೇಳಗಳ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಸಂಘಟನೆ ಅತ್ಯಂತ ಗಟ್ಟಿಯಾಗಿ ಬೆಳೆದಿದೆ. ಮತ್ತು ವಿವಿಧ ಬಗೆಯ ಹೂವ್ವಿನ ಸಸಿಗಳನ್ನು ಮಾರಾಟ ಮಾಡುವುದರ ಮೂಲಕ ಮಹಿಳೆಯರು ಆರ್ಥಿಕವಾಗಿ ಮುಂದೆ ಬರುತ್ತಿರುವುದು ಗಮನಾರ್ಹ ಸಂಘತಿ ಎಂದು ಹೇಳಿದರು.

ಈ ವೇಳೆಯಲ್ಲಿ ಟಿಆರ್‌ಸಿ ಅದ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ಜಿ ಆರ್ ಹೆಗಡೆ ಬೆಳ್ಳಕೆರೆ ಕಾರ್ಯಕ್ರಮದ ಕುರಿತು ಮಾತನಾಡಿದರು. ನಂತರ ತೋಟಗಾರಿಕೆ ಇಳಾಖೆಯ ಸಹಾಯಕ ನಿರ್ದೇಶಕ ಗಣೆಶ ಹೆಗಡೆ ಅವರು ಮುಂದಿನ ದಿನದಲ್ಲಿ ಅಲಂಕಾರಿಕ ಗಿಡಗಳನ್ನು ಬೆಳೆಸುವುವವರಿಗೆ ನಮ್ಮ ಇಲಾಖೆಯಿಂದ ಸರಕಾರದಿಂದ ದೊರೆಯಬಹುದಾದ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದು ಸಲಹೇ ನೀಡಿದರು.

ಈ ಸಂದರ್ಭದಲ್ಲಿ ದೃಶ್ಯಂತರಾಜ, ಶೈಲಜಾ ಗೋರ್ನಮನೆ, ಶ್ರೀಧರ ರಾಮಕೃಷ್ಣ ಹೆಗಡೆ ಕಡವೆ,ಸೇರದಂತೆ ಅನೇಕರು ಇದ್ದರು.

Edited By : PublicNext Desk
Kshetra Samachara

Kshetra Samachara

25/07/2026 06:59 pm

Cinque Terre

2.5 K

Cinque Terre

0

ಸಂಬಂಧಿತ ಸುದ್ದಿ