ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಳೆ ಕೊರತೆ ಮಧ್ಯೆ ಜೀವಜಲಕ್ಕಾಗಿ ಹಾಹಾಕಾರ

ತುಂಗಭದ್ರಾ ಜಲಾಶಯ ಸ್ಥಾಪನೆಯಾಗಿ ಬರೋಬ್ಬರಿ 75 ವರ್ಷಕ್ಕೂ ಅಧಿಕ ವರ್ಷ ಕಳೆದಿದೆ. ಅಂದಿನಿಂದ ಇಂದಿನ ವರೆಗೆ ತನ್ನದೇ ಜಿಲ್ಲೆಯ ಹಳ್ಳಿಗಳ ಜನಕ್ಕೆ ಕುಡಿಯೋ ನೀರು ಕೊಡೋದಕ್ಕೆ ಆಗಿಲ್ಲ. ಅದುವೇ ವಿಜಯನಗರ ಜಿಲ್ಲೆ. ಈ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತೀ ಕಡಿಮೆ ಮಳೆ ಆಗಿದೆ ಅನ್ನೋ ವರದಿಗಳು ಈಗಾಗಲೇ ಸರ್ಕಾರದ ಅಂಗಳದಲ್ಲಿದೆ. 66% ಪ್ರತಿಶತ ಮಳೆ ಕೊರತೆ ಬೆನ್ನಲ್ಲೇ ಸಿಎಂ ಡಿಕೆಶಿ ವಿಜಯನಗರ ಜಿಲ್ಲೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಖುದ್ದು ಜಿಲ್ಲಾಧಿಕಾರಿ, ಸಿಇಒ, ಕೃಷಿ ಅಧಿಕಾರಿಗಳು ಜಂಟಿ ಸರ್ವೇ ನಡೆಸಿ ಮಳೆ ಕೊರತೆಯಿಂದ ರೈತರಿಗೆ ಆದ ವಾಸ್ತವ ವರದಿ ತಯಾರಿಸಿ ಸರ್ಕಾರಕ್ಕೆ ಜಿಲ್ಲಾಡಳಿತ ವರದಿ ನೀಡಿದೆ. ಇದ್ರ ಮಧ್ಯೆ ವಿಜಯನಗರ ಜಿಲ್ಲೆಯೊಂದರಲ್ಲೇ ಬರೋಬ್ಬರಿ 40ಕ್ಕೂ ಅಧಿಕ ಹಳ್ಳಿಗಳಲ್ಲಿ ನೀರಿನ ಕೊರತೆ ಉಂಟಾಗಿದೆ.

ವಿಜಯನಗರ ಜಿಲ್ಲೆಯಲ್ಲಿ ಆರು ತಾಲೂಕುಗಳಿಗೆ ಅದ್ರಲ್ಲಿ ಅರಸಿಕೇರಿ ತಾಲೂಕಿನ ವ್ಯಾಪ್ತಿಯ 25ಕ್ಕೂ ಅಧಿಕ ಹಳ್ಳಿಗಳಲ್ಲಿ ಕುಡಿಯೋ ನೀರಿನ ಸಮಸ್ಯೆ ಉಂಟಾಗಿದೆ. ಜೊತೆಗೆ ಹರಪನಹಳ್ಳಿ ತಾಲೂಕಿನ ಹತ್ತಾರು ಹಳ್ಳಿಗಳಲ್ಲಿ ಕುಡಿಯೋ ನೀರಿನ ಸಮಸ್ಯೆ ಉಂಟಾಗಿದೆ. ಸಮಸ್ಯೆ ಇರುವ ಎಲ್ಲಾ ಗ್ರಾಮಕ್ಕೆ ಖಾಸಗಿ ಬೋರ್ ವೆಲ್ ಮೂಲಕ ನೀರು ಸಪ್ಲೈ ಮಾಡ್ತಿದ್ದೇವೆ. ಎಲ್ಲಿ ಪಾಸಿಬಲ್ ಇದೆಯೋ ಅಲ್ಲಿ ಬೋರ್ ವೆಲ್ ಕೊರೆಯಿಸಿ ನೀರು ಕೊಡುವ ಪ್ರಯತ್ನ ನಡೆದಿದೆ. ಮಳೆ ಆಗಿಲ್ಲ ಅಂತ ಜನ ಗುಳೇ ಹೋಗ್ತಿದ್ದಾರೆ. ಅಂತವರನ್ನ ಗುರುತಿಸಿ ಅವರ ಮಕ್ಕಳಿಗೆ ಶಿಕ್ಷಣ, ವಸತಿ ವ್ಯವಸ್ಥೆ ಮಾಡ್ತಿದ್ದೇವೆ ಅಂತ ಜಿಪಂ ಸಿಇಒ ಅಕ್ರಂ ಪಾಷಾ ಹೇಳಿದ್ರು.

ಒಟ್ಟಿನಲ್ಲಿ ಮಳೆ ಕೈಕೊಟ್ಟಿದ್ರಿಂದ ಗ್ರಾಮೀಣ ಜನ ಸಂಕಷ್ಟಕ್ಕೀಡಾದ್ರೆ, ಮತ್ತೊಂದೆಡೆ ಕುಡಿಯೋ ನೀರಿಗಾಗಿಯೂ ಮತ್ತೊಂದೆಡೆ ಹಾಹಾಕಾರ ಉಂಟಾಗಿದೆ. ದೂರದ ಪಾವಗಡಕ್ಕೆ ಜಿಲ್ಲಾಡಳಿತ, ಜಿಪಂ ಅನುಮತಿ ಮೇರೆಗೆ ತುಂಗಭದ್ರಾ ಜಲಾಶಯದಿಂದ ನೀರು ಸಪ್ಲೈ ಆಗುತ್ತೆ. ಆದ್ರೆ ವಿಜಯನಗರ ಜಿಲ್ಲೆಯಲ್ಲೇ ರಾಜ್ಯದ ಎರಡನೇ ಅತೀ ದೊಡ್ಡ ಜಲಾಶಯ ಇದ್ರೂ ಅಂದಿನಿಂದ ಇಂದಿನವರೆಗೆ ಸಮರ್ಪಕ ಕುಡಿಯೋ ನೀರು ಸಪ್ಲೈ ಮಾಡಲು ಆಗದೇ ಇರೋದು ನಿಜಕ್ಕೂ ದುರಂತದ ಸಂಗತಿ. ಇನ್ಮುಂದಾದ್ರೂ ಸರ್ಕಾರ ತ್ವರಿತಗತಿಯಲ್ಲಿ ಸಮಸ್ಯೆ ಉಲ್ಭಣಗೊಂಡ ಗ್ರಾಮಗಳಿಗೆ ಕುಡಿಯೋ ನೀರು ಸಪ್ಲೈ ಮಾಡಿ ಸಮಸ್ಯೆಗೆ ಮುಕ್ತಿ ಹಾಡುತ್ತಾ ಕಾದು ನೋಡಬೇಕು.

-ಪಾಂಡುರಂಗ ಜಂತ್ಲಿ, ಪಬ್ಲಿಕ್ ನೆಕ್ಸ್ಟ್ ವಿಜಯನಗರ

Edited By :
PublicNext

PublicNext

26/07/2026 05:58 pm

Cinque Terre

16.64 K

Cinque Terre

0

ಸಂಬಂಧಿತ ಸುದ್ದಿ