ಹುಬ್ಬಳ್ಳಿ: "ದೇಶದ ರಕ್ಷಣೆಗಾಗಿ ಯೋಧರು ಮಾಡಿರುವ ತ್ಯಾಗ-ಬಲಿದಾನಗಳನ್ನು ಮರೆಯಲು ಸಾಧ್ಯವಿಲ್ಲ. ಕಾರ್ಗಿಲ್ ವಿಜಯದಲ್ಲಿ ನಮ್ಮ ಯೋಧರು ತೋರಿದ ಅಪ್ರತಿಮ ಶೌರ್ಯ, ಸಾಹಸಗಳು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿದ್ದು, ದೇಶದ ಸೇನಾ ಶಕ್ತಿಯನ್ನು ಜಗತ್ತಿಗೆ ಪರಿಚಯಿಸುವ ಗೆಲುವನ್ನು ತಂದುಕೊಟ್ಟ ನಮ್ಮ ಹೆಮ್ಮೆಯ ಯೋಧರಿಗೆ ಸೆಲ್ಯೂಟ್ ಹೇಳೋಣ. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಬಲಿಕೊಟ್ಟ ಮಹಾನ್ ವೀರರಿಗೆ ಗೌರವ ಸಲ್ಲಿಸೋಣ," ಎಂದು ಸ್ವರ್ಣ ಸಮೂಹ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ. ವಿ.ಎಸ್.ವಿ. ಪ್ರಸಾದ್ ಹೇಳಿದರು.
ನಗರದ ಭಾವಾಜಿ ಮಠದ ಉದ್ಯಾನದಲ್ಲಿ ಭಗತ್ ಸಿಂಗ್ ಸೇವಾ ಸಂಘದವರು ಆಯೋಜಿಸಿದ್ದ 'ಕಾರ್ಗಿಲ್ ವಿಜಯೋತ್ಸವ' ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, "ದೇಶಕ್ಕಾಗಿ, ಇಡೀ ಸಮಾಜದ ಒಳಿತಿಗಾಗಿ ದುಡಿದ, ತ್ಯಾಗ ಮಾಡಿದ ಮಹನೀಯರಿಗೆ ಕೃತಜ್ಞತೆ ಸಲ್ಲಿಸುವುದು ನಮ್ಮ ಸತ್ಸಂಪ್ರದಾಯ. ಅಂಥ ಒಂದು ಶ್ಲಾಘನೀಯ ಕಾರ್ಯವನ್ನು ಭಗತ್ ಸಿಂಗ್ ಸಂಸ್ಥೆ ಮಾಡುತ್ತಿದೆ. ಪ್ರತಿ ವರ್ಷವೂ ಕಾರ್ಗಿಲ್ ವಿಜಯೋತ್ಸವ ಆಚರಿಸುವ ಮೂಲಕ ಯುವ ಪೀಳಿಗೆಗೆ ಇತಿಹಾಸ ಪರಿಚಯಿಸುವ ಮತ್ತು ದೇಶ ರಕ್ಷಣೆಯ ವಿಷಯದಲ್ಲಿನ ಅಡ್ಡಿ-ಆತಂಕಗಳ ಬಗ್ಗೆ ಜಾಗೃತಿ ಮೂಡಿಸಲು ಶ್ರಮಿಸುತ್ತಿದೆ," ಎಂದು ಭಗತ್ ಸಿಂಗ್ ಸೇವಾ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು. ಇಂತಹ ಕಾರ್ಯಗಳಿಗೆ ತಾವು ಸದಾ ಅಗತ್ಯ ಸಹಾಯ-ಸಹಕಾರಗಳನ್ನು ನೀಡುವುದಾಗಿ ಹೇಳಿದರು.
ಈ ವೇಳೆ ಭಗತ್ ಸಿಂಗ್ ಸೇವಾ ಸಂಸ್ಥೆಯ ವಿಶಾಲ್ ಜಾಧವ್, ಸುನೀಲ್ ಬೂದೂರ, ರಾಹುಲ್ ವಾಗ್ಮರೆ, ಪ್ರೇಮಸಿಂಗ್ ರಾಠೋಡ್ ಉಪಸ್ಥಿತರಿದ್ದರು.
ಈ ಸಮಾರಂಭದಲ್ಲಿ ಮಾಜಿ ಸೈನಿಕರಾದ ಸುಬೇದಾರ್ ರಾಮಸಿದ್ದಪ್ಪ ಜಾಯಿ, ಸುಬೇದಾರ್ ಬಾಬು ಅರವಳ್ಳಿ, ಲೆಫ್ಟಿನೆಂಟ್ ಕೆ.ಸಿ. ಹಿರೇಮಠ, ಹವಾಲ್ದಾರ್ ಅನಿಲ್ ಕುಮಾರ್ ಪಿ.ಎಂ., ಸಂತೋಷ್ ರಾಠೋಡ್ ಭಾಗವಹಿಸಿದ್ದರು. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
Kshetra Samachara
27/07/2026 06:35 pm
LOADING...