ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಟೋದಲ್ಲಿ ಮರೆತು ಬಿಟ್ಟಿದ್ದ ಬ್ಯಾಗ್ ಪತ್ತೆ; ಮಾಲೀಕರಿಗೆ ಹಸ್ತಾಂತರಿಸಿದ ಹುಬ್ಬಳ್ಳಿ ಪೊಲೀಸರು

ಹುಬ್ಬಳ್ಳಿ: ನಗರದಲ್ಲಿ ಪ್ರಯಾಣಿಕರೊಬ್ಬರು ಸುಮಾರು ₹16,000 ಮೌಲ್ಯದ ಬಟ್ಟೆಗಳಿದ್ದ ಬ್ಯಾಗ್‌ನ್ನು ಆಟೋದಲ್ಲಿ ಮರೆತು ಬಿಟ್ಟು ತೆರಳಿದ ಘಟನೆ ನಡೆದಿದೆ.

ಈ ಕುರಿತು ದೂರು ಸ್ವೀಕರಿಸಿದ ತಕ್ಷಣ ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಅವರ ನೇತೃತ್ವದ ತಂಡ ಕಾರ್ಯಪ್ರವೃತ್ತರಾಗಿ, ಆಟೋವನ್ನು ಪತ್ತೆಹಚ್ಚಿ ಬ್ಯಾಗ್‌ನ್ನು ಸುರಕ್ಷಿತವಾಗಿ ವಶಪಡಿಸಿಕೊಂಡರು.

ನಂತರ ಬ್ಯಾಗ್‌ನಲ್ಲಿದ್ದ ವಸ್ತುಗಳನ್ನು ಪರಿಶೀಲಿಸಿ, ನಿಜವಾದ ಮಾಲೀಕರನ್ನು ಗುರುತಿಸಿ ಅವರ ಸಮ್ಮುಖದಲ್ಲಿ ಸಂಪೂರ್ಣ ಸ್ವತ್ತನ್ನು ಮರಳಿ ಹಸ್ತಾಂತರಿಸಲಾಯಿತು.

Edited By : PublicNext Desk
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

06/08/2026 10:36 am

Cinque Terre

45.57 K

Cinque Terre

0

ಸಂಬಂಧಿತ ಸುದ್ದಿ