ಧಾರವಾಡ: ಬರ ಪರಿಸ್ಥಿತಿ ಸಂಬಂಧ ಡಿಸಿ, ಸಿಇಓಗಳ ಜೊತೆ ಸಭೆ ನಡೆಸಲು ಸಿಎಂ ತಾಕೀತು ಮಾಡಿದ್ದಾರೆ. ಈ ಹಿನ್ನೆಲೆ ಕೃಷಿ, ಕಂದಾಯ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಬರ ಪರಿಸ್ಥಿತಿ ಸಲುವಾಗಿ ಸಭೆ ನಡೆಸಲಾಗಿದ್ದು, ನಾಳೆ ಧಾರವಾಡ ಜಿಲ್ಲೆಯ ಬೇರೆ ಬೇರೆ ತಾಲೂಕುಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿ ಅವಲೋಕಿಸಲಾಗುವುದು ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ತಿಳಿಸಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ಕಲಘಟಗಿ, ಹುಬ್ಬಳ್ಳಿ ತಾಲೂಕಿನ ಜಮೀನಿಗೆ ಭೇಟಿ ನೀಡಿದ್ದೇವೆ. ಜಮೀನಿಗೆ ಭೇಟಿ ನೀಡಿ ಸಮೀಕ್ಷೆ ನಡೆಸುವಂತೆ ಅಧಿಕಾರಿಗಳಿಗೂ ಸೂಚಿಸಿದ್ದೇವೆ. ನಾಳೆ ನವಲಗುಂದ, ಅಳ್ನಾವರ ತಾಲೂಕಿನ ಜಮೀನಿಗೆ ಭೇಟಿ ನೀಡುತ್ತೇವೆ. ಬರಗಾಲದಿಂದ ಬೆಳೆ ಹಾನಿ ಬಗ್ಗೆ ಅಧಿಕಾರಿಗಳು ವರದಿ ಸಿದ್ಧಪಡಿಸುತ್ತಾರೆ. ಅಂತಿಮವಾಗಿ ಅದನ್ನು ಸರ್ಕಾರಕ್ಕೆ ಸಲ್ಲಿಸುತ್ತೇವೆ ಎಂದರು.
42 ಸಾವಿರ ಹೆಕ್ಟೇರ್ ಹೆಸರು, 42 ಸಾವಿರ ಹೆಕ್ಟೇರ್ ಮೆಕ್ಕೆಜೋಳ, ಸೇರಿ ಹತ್ತಿ ಕೂಡ ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ಒಟ್ಟಾರೆ 2 ಲಕ್ಷ 80 ಸಾವಿರ ಹೆಕ್ಟೇರ್ ಬಿತ್ತನೆ ಆಗಿದೆ. ಬೀಜ, ಗೊಬ್ಬರ ಸಮರ್ಪಕವಾಗಿ ವಿತರಣೆ ಕೂಡ ಆಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಅತಿವೃಷ್ಟಿ ಆಗಿತ್ತು. ಈ ವರ್ಷ ಸಮರ್ಪಕವಾಗಿ ಮಳೆ ಆಗಿಲ್ಲ. ಅಲ್ಪ ಸ್ವಲ್ಪ ಮಳೆಯಾದರೂ ಬೆಳೆಗೆ ಸಹಕಾರಿ ಆಗಿಲ್ಲ. ಇದನ್ನು ಜಿಲ್ಲಾಡಳಿತದ ಮೂಲಕ ಸರ್ಕಾರದ ಗಮನಕ್ಕೆ ತರುತ್ತೇವೆ. ಪ್ರತಿ ವರ್ಷದಂತೆ ಈ ಬಾರೀ ಬೆಳೆ ಬಂದಿಲ್ಲ. ಶೇ.35 ರಷ್ಟು ಈ ಬಾರಿ ಮಳೆ ಆಗಿಲ್ಲ. ಈ ತಿಂಗಳು ಇನ್ನೂ ಮಳೆ ಆಗುವ ಸಾಧ್ಯತೆ ಇದೆ. ಸರ್ಕಾರದ ಅನುಮತಿ ಬಂದ ಮೇಲೆ ಸರ್ವೆ ಮಾಡಿ ವರದಿ ಕೊಡುತ್ತೇವೆ. ಈಗಾಗಲೇ ಬೆಳೆ ನಾಶಪಡಿಸಿದ ರೈತರದ್ದು ಕೂಡ ಹಾನಿ ಎಂದು ಪರಿಗಣಿಸುತ್ತೇವೆ ಎಂದರು.
ಮಲಪ್ರಭಾ ನದಿಯಲ್ಲಿರುವ ನೀರಿನ ಬಗ್ಗೆ ಮಾತನಾಡಿದ ಸಚಿವರು, ಸದ್ಯ 5 ಸಾವಿರ ಕ್ಯೂಸೆಕ್ ಒಳಹರಿವು ಇದೆ. ಅದೇ ಆಧಾರದಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/08/2026 11:07 pm
LOADING...