ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭ್ರಷ್ಟಾಚಾರದಲ್ಲಿ ದೇಶವನ್ನೇ ಮುಳುಗಿಸಿದ್ದಾರೆ: ಕೇಂದ್ರದ ವಿರುದ್ಧ ಸಂತೋಷ ಲಾಡ್ ವಾಗ್ದಾಳಿ..!

ಹುಬ್ಬಳ್ಳಿ: ಎಸ್‌ಐಆರ್ (SIR) ವಿಚಾರದಲ್ಲಿ ರಾಜ್ಯದಲ್ಲಿ ನಡೆಯುವ ಪ್ರಕ್ರಿಯೆಗೂ ಬೇರೆ ರಾಜ್ಯದ ಪ್ರಕ್ರಿಯೆಗೂ ವ್ಯತ್ಯಾಸವಿದೆ. ನಾವು ಮಾಡುವ ಆರೋಪಕ್ಕೆ ಅಂಕಿಸಂಖ್ಯೆಗಳಿವೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು.

ಹುಬ್ಬಳ್ಳಿಯಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ದೇಶದ ಪ್ರಧಾನಿ ಯಾವುದಕ್ಕೂ ಉತ್ತರ ನೀಡುತ್ತಿಲ್ಲ. ಪ್ರಧಾನಿ ರಿಲೀಫ್ ಫಂಡ್‌ಗೆ (PM Cares / PMNRF) ಬಂದ 20 ಸಾವಿರ ಕೋಟಿ ರೂಪಾಯಿ ಬಗ್ಗೆ ಉತ್ತರ ನೀಡುತ್ತಿಲ್ಲ. ಹಾಗಾದ್ರೆ ಆ ದುಡ್ಡಿನ ಬಗ್ಗೆ ಯಾರು ಕೇಳಬೇಕು? ಬಿಜೆಪಿಯವರು ಕಾಂಗ್ರೆಸ್‌ನ 70 ವರ್ಷದ ಲೆಕ್ಕ ಕೇಳುತ್ತಾರೆ. ಆದ್ರೆ ಈ 20 ಸಾವಿರ ಕೋಟಿ ಬಗ್ಗೆ ಇಲ್ಲಿಯವರೆಗೆ ಉತ್ತರ ನೀಡುತ್ತಿಲ್ಲ. ಹಾರಿಕೆ ಉತ್ತರ ಕೊಡುವುದರಲ್ಲಿ ಅವರು ಎಕ್ಸ್‌ಪರ್ಟ್. ಭ್ರಷ್ಟಾಚಾರದಲ್ಲಿ ಇಡೀ ದೇಶವನ್ನೇ ಮುಳುಗಿಸಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ದೊಡ್ಡ ಅಭಿವೃದ್ಧಿಯಾಗಿದೆ ಎಂದು ಬಿಂಬಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

05/08/2026 11:45 am

Cinque Terre

74.75 K

Cinque Terre

12

ಸಂಬಂಧಿತ ಸುದ್ದಿ