ಧಾರವಾಡ: ಮಂಗಳವಾರ ರಾತ್ರಿ ಬಿಆರ್‌ಟಿಎಸ್‌ಗೆ ಸೇರಿದ ಚಿಗರಿ ಬಸ್ ಅತಿವೇಗವಾಗಿ ಬಂದಿದ್ದರಿಂದ ರಸ್ತೆ ದಾಟುತ್ತಿದ್ದ ಇಬ್ಬರು ಯುವತಿಯರು ಹೆದರಿ ಆಯತಪ್ಪಿ ಬಿದ್ದ ಘಟನೆ ಸತ್ತೂರಿನಲ್ಲಿ ನಡೆದಿದೆ. ಇದರಿಂದ ರೊಚ್ಚಿಗೆದ್ದ ಜನರು ರಾತ್ರಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರು. ಬಳಿಕ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಂತೆ ಮಾಡಿದ್ದರು.
ಬುಧವಾರ ಬೆಳಿಗ್ಗೆಯೂ ಸತ್ತೂರಿನಲ್ಲಿ ಸಾರ್ವಜನಿಕರು ಬಿಆರ್‌ಟಿಎಸ್ ರಸ್ತೆ ಬಂದ್ ಮಾಡಿ, ಬಿಆರ್‌ಟಿಎಸ್ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.
ಅತಿವೇಗದಲ್ಲಿ ಚಿಗರಿ ಬಸ್‌ಗಳು ಸಂಚರಿಸುತ್ತಿವೆ. ಬಿಆರ್‌ಟಿಎಸ್ ಯೋಜನೆಯೇ ಅವ್ಯವಸ್ಥೆಯಿಂದ ಕೂಡಿದ್ದು, ಇದರಿಂದ ಪದೇಪದೇ ಅಪಘಾತಗಳು ಸಂಭವಿಸುತ್ತಿವೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಸಾರ್ವಜನಿಕರು ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/08/2026 04:37 pm
LOADING...