ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಜಿಲ್ಲೆಗೆ ಬರುತ್ತಿದ್ದಂತೆಯೇ ಸಚಿವ ಸಂತೋಷ್ ಲಾಡ್‌ಗೆ ರೈತರ ಪ್ರತಿಭಟನೆ ಬಿಸಿ !

ಧಾರವಾಡ : ಎರಡನೇ ಬಾರಿಗೆ ಸಚಿವ ಸ್ಥಾನ ಪಡೆದು ಮೊದಲ ಬಾರಿಗೆ ಧಾರವಾಡಕ್ಕೆ ಬಂದ ಸಚಿವ ಸಂತೋಷ್ ಲಾಡ್ ಅವರಿಗೆ ರೈತರ ಪ್ರತಿಭಟನೆಯ ಬಿಸಿ ಮುಟ್ಟಿದೆ.

ಮಳೆ ಕೊರತೆಯಿಂದ ಹಾನಿಯಾದ ಬೆಳೆಯನ್ನು ಜಿಲ್ಲಾಧಿಕಾರಿ ಕಚೇರಿಗೆ ತಂದ ನವಲಗುಂದ ತಾಲೂಕಿನ ಶಿರೂರು ಗ್ರಾಮದ ರೈತರು, ಅದನ್ನು ಸಚಿವ ಸಂತೋಷ್ ಲಾಡ್ ಅವರಿಗೆ ತೋರಿಸಿ ತಮ್ಮ ಬೇಡಿಕೆಗಳ ಜೊತೆಗೆ ರೈತರ ಸಮಸ್ಯೆಗಳನ್ನು ತಿಳಿಸಿದರು.

"ಮಳೆ ಇಲ್ಲದೆ ಬೆಳೆ ಒಣಗಿಹೋಗಿದೆ. ಅನೇಕ ರೈತರು ಬೆಳೆಯನ್ನು ಹರಗಿ ನಾಶಪಡಿಸಿದ್ದಾರೆ. ಕೂಡಲೇ ಬೆಳೆ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ನೀಡಬೇಕು. ನಾಳೆ ಲಾಡ್ ಅವರು ಶಿರೂರು ಗ್ರಾಮಕ್ಕೆ ಬಂದು ಬೆಳೆ ಹಾನಿ ವೀಕ್ಷಣೆ ಮಾಡಬೇಕು. ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ, ಅದಕ್ಕೊಂದು ಕಾನೂನನ್ನು ಸರ್ಕಾರ ಜಾರಿಗೆ ತರಬೇಕು" ಎಂದು ರೈತರು ಆಗ್ರಹಿಸಿದರು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

05/08/2026 06:05 pm

Cinque Terre

14.17 K

Cinque Terre

2

ಸಂಬಂಧಿತ ಸುದ್ದಿ