ಶಿರಹಟ್ಟಿ: 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇಂದು ಮಂಗಳವಾರ ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.
ಹೌದು.... ಸಭೆಯಲ್ಲಿ ಪ್ರೊಟೊಕಾಲ್ ಪ್ರಕಾರ ಮಾತನಾಡಲು ಎಲ್ಲರಿಗೂ ಅವಕಾಶ ನೀಡಬೇಕು. ಅದನ್ನು ಬಿಟ್ಟು ನೀವು ಕೇವಲ ಒಬ್ಬರಿಗೆ ಮಾತನಾಡಲು ಅವಕಾಶ ಕೊಟ್ಟು ಕಾರ್ಯಕ್ರಮ ಮುಗಿಸುತ್ತೀರಿ, ಹಾಗಾದ್ರೆ ನಾವೆಲ್ಲ ಬರೋದು ಯಾಕೆ ಅಂತ ತಾಲೂಕು ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ವೀರಯ್ಯ ಮಠಪತಿ ಅವರು ತಮ್ಮ ಆಕ್ರೋಶವನ್ನು ಹೊರಹಾಕಿದರು.
ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಬಾರದೆ ತಮ್ಮ ಪ್ರತಿನಿಧಿಗಳನ್ನು ಕಳುಹಿಸಿದ್ದಾರೆ, ಅಲ್ಲದೆ ಅವರು ಬಾರದೆ ಇರಲು ಕಾರಣವನ್ನು ಸಹ ನಮಗೆ ತಿಳಿಸಿಲ್ಲ ಎಂದು ಗ್ರೇಡ್-2 ತಹಶೀಲ್ದಾರರಾದ ಮುಳಗುಂದಮಠ ಅವರು ಹೇಳಿದರು.
Kshetra Samachara
28/07/2026 03:14 pm
LOADING...