ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಂಡರಗಿಯಲ್ಲಿ 'ಸ್ವಚ್ಛತೆಯತ್ತ ಒಂದು ಹೆಜ್ಜೆ': ರಸ್ತೆಗಿಳಿದು ಪೊರಕೆ ಹಿಡಿದು ಕಸ ಗುಡಿಸಿದ ಶಾಸಕ ಚಂದ್ರು ಲಮಾಣಿ!

ಮುಂಡರಗಿ: ಪಟ್ಟಣದ ವಿದ್ಯಾನಗರದಲ್ಲಿ ಮಂಗಳವಾರ 'ಸ್ವಚ್ಛತೆಯ ಕಡೆಗೆ ಒಂದು ಹೆಜ್ಜೆ' ಅಭಿಯಾನದಡಿ ಬೃಹತ್ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸ್ವಚ್ಛತಾ ಕಾರ್ಯಕ್ರಮದ ವೇಳೆ ಸ್ವತಃ ಕಸ ಗುಡಿಸುವ ಸ್ಥಳಕ್ಕೆ ಆಗಮಿಸಿದ ಶಾಸಕ ಚಂದ್ರು ಲಮಾಣಿ, ವಿದ್ಯಾನಗರ ಬಡಾವಣೆಯ ತ್ಯಾಜ್ಯ ಹಾಗೂ ಕಸ ಸುಲಭವಾಗಿ ತೆರವಾಗಲು ಕೆಲಕಾಲ ತಾವೇ ಕೈಯಲ್ಲಿ ಪೊರಕೆ ಹಿಡಿದು ರಸ್ತೆ ಸ್ವಚ್ಛಗೊಳಿಸುವ ಮೂಲಕ ಸಾರ್ವಜನಿಕರಿಗೆ ಮಾದರಿಯಾದರು.

ಬಳಿಕ ವಾರ್ಡ್‌ನಲ್ಲಿ ಸಂಚರಿಸಿ ಸಾರ್ವಜನಿಕರ ಕುಂದು-ಕೊರತೆಗಳನ್ನು ಆಲಿಸಿದ ಅವರು, ಪಟ್ಟಣದ ಸ್ವಚ್ಛತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. "ವಿಶೇಷವಾಗಿ ಮಳೆಗಾಲ ಹಾಗೂ ಬೇಸಿಗೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಅಭಾವವಾಗದಂತೆ ಮುನ್ನೆಚ್ಚರಿಕೆ ವಹಿಸಿ, ನಿರಂತರ ಸರಬರಾಜಿಗೆ ಅಗತ್ಯ ಕ್ರಮ ವಹಿಸಬೇಕು" ಎಂದು ಪುರಸಭೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

04/08/2026 04:54 pm

Cinque Terre

2.6 K

Cinque Terre

0

ಸಂಬಂಧಿತ ಸುದ್ದಿ